ದೇಶದಲ್ಲಿ ಕೊರೊನಾ ಸೋಂಕು ಒಂದು ಕಡೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಭಾರಿ ಹಣ ವಸೂಲಿ ಮಾಡ್ತಿವೆ. ಉತ್ತರ ಪ್ರದೇಶದ ಮಥುರಾದ ಖಾಸಗಿ ಆಸ್ಪತ್ರೆಯೊಂದು ಚಿಕಿತ್ಸೆಗೆ 20 ಪಟ್ಟು ಹಣವನ್ನು ವಸೂಲಿ ಮಾಡಿದೆ. ಮಥುರಾದ ಅಸ್ಟ್ಪಾಲ್ ಖಾಸಗಿ ಆಸ್ಪತ್ರೆ 3.7 ಲಕ್ಷ ರೂಪಾಯಿಯನ್ನು ವಸೂಲಿ ಮಾಡಿದೆ.
42 ವರ್ಷದ ಹೆಮ್ಲತಾ ಅಗರ್ವಾಲ್ ಕೊರೊನಾ ಸೋಂಕಿಗೆ ಒಳಗಾಗಿದ್ದಳು. ಆಕೆಯನ್ನು ಮಥುರಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕೆಲವೇ ಗಂಟೆಯಲ್ಲಿ ಆಕೆ ಸಾವನ್ನಪ್ಪಿದ್ದಳು. ಕೇವಲ ಒಂದು ದಿನದ ಚಿಕಿತ್ಸೆಗಾಗಿ ಕುಟುಂಬ ಸದಸ್ಯರಿಂದ ಆಸ್ಪತ್ರೆ 3.7 ಲಕ್ಷ ರೂಪಾಯಿ ವಸೂಲಿ ಮಾಡಿದೆ.
ರೋಗಿಯನ್ನು ದಾಖಲು ಮಾಡುವ ಸಂದರ್ಭದಲ್ಲಿ 6.75 ಲಕ್ಷ ರೂಪಾಯಿಗಳನ್ನು ನೀಡಲಾಗಿತ್ತು. ಈ ಹಣವನ್ನು ಹಿಂದಿರುಗಿಸಲು ಆಸ್ಪತ್ರೆ ಆರಂಭದಲ್ಲಿ ನಿರಾಕರಿಸಿತ್ತು. ವೈದ್ಯರು ಮತ್ತು ರೋಗಿ ಕುಟುಂಬ ಸದಸ್ಯರ ನಡುವಿನ ವಾದ-ವಿವಾದದ ಆಡಿಯೋ ವೈರಲ್ ಆಗಿದೆ. ಗಲಾಟೆ ನಂತ್ರ ಆಸ್ಪತ್ರೆ ಆಡಳಿತ 3 ಲಕ್ಷ ರೂಪಾಯಿಗಳನ್ನು ಸಂತ್ರಸ್ತೆಯ ಕುಟುಂಬಕ್ಕೆ ಹಿಂದಿರುಗಿಸಿದೆ.