ಆನ್ಲೈನ್ ನಲ್ಲಿ ವಸ್ತುಗಳನ್ನು ಖರೀದಿ ಮಾಡಿ ಮೋಸ ಹೋಗುವವರ ಸಂಖ್ಯೆ ಸಾಕಷ್ಟಿದೆ. ಆನ್ಲೈನ್ ನಲ್ಲಿ ಬಂಗಾರದ ಗಟ್ಟಿ ಖರೀದಿ ಮಾಡಿ ಜನರು ಈಗ ಮೋಸ ಹೋಗಿದ್ದಾರೆ.
ಆನ್ಲೈನ್ ನಲ್ಲಿ ಬಂಗಾರದ ಗಟ್ಟಿ ಖರೀದಿ ಮಾಡಿದ್ದಾರೆ. ಮನೆಗೆ ಬಂದ ಗಟ್ಟಿ ಬಂಗಾರದ್ದಲ್ಲ ಬದಲಾಗಿ ಹಿತ್ತಾಳೆ, ಇಟ್ಟಿಗೆಯದ್ದು ಎಂಬುದು ಗೊತ್ತಾಗಿದೆ.
ಮೋಸ ಹೋದವರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ಶುರು ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಮೂವರು ಚಿನ್ನದ ಗಟ್ಟಿ ಬದಲು ಇಟ್ಟಿಗೆ ನೀಡಿ ಜನರಿಗೆ ಮೋಸ ಮಾಡ್ತಿದ್ದರು ಎಂಬುದು ಪತ್ತೆಯಾಗಿದೆ.
ಪೊಲೀಸರು ಎಂಟು ಲಕ್ಷ ರೂಪಾಯಿ ನಗದು, ಮೂರು ಆಧಾರ್ ಕಾರ್ಡ್‌ಗಳು, ನಕಲಿ ಚಿನ್ನದ ಇಟ್ಟಿಗೆ, 9 ಸಿಮ್ ಕಾರ್ಡ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಾಸ್ತವವಾಗಿ, ಮಥುರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಗ್ಯಾಂಗ್ ದೀರ್ಘಕಾಲದಿಂದ ಸಕ್ರಿಯವಾಗಿತ್ತು.