ಪುಣೆ: ಅಜ್ಜಿಯ ಮನೆಗೆ ಹೋಗಿದ್ದ 16 ವರ್ಷದ ಬಾಲಕಿಗೆ ಸೋದರತ್ತೆ ಲೈಂಗಿಕ ಕಿರುಕುಳ ನೀಡಿದ್ದು ಇದಕ್ಕೆ ಆಕೆಯ ಗೆಳೆಯ ಸಹಕಾರ ನೀಡಿದ್ದಾನೆ.
ಪುಣೆಯಲ್ಲಿ ವಾಸವಾಗಿರುವ ಮಹಿಳೆ ಲಾಕ್ ಡೌನ್ ಸಂದರ್ಭದಲ್ಲಿ ಉಂಡ್ರಿಯಲ್ಲಿರುವ ತನ್ನ ಅತ್ತೆ ಮನೆಗೆ 16 ವರ್ಷದ ಹುಡುಗಿ ಸೇರಿದಂತೆ ನಾಲ್ಕು ಮಕ್ಕಳನ್ನು ಕಳುಹಿಸಿದ್ದಾರೆ. ಮಹಿಳೆಯ ನಾದಿನಿಯನ್ನು ಭೇಟಿಯಾಗಲು ಆಗಾಗ ಬಂದು ಹೋಗುತ್ತಿದ್ದ ಆಕೆಯ ಬಾಯ್ ಫ್ರೆಂಡ್ 16 ವರ್ಷದ ಮಗಳಿಗೆ ಬ್ಲೂಫಿಲಂಗಳನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ.
ನಾದಿನಿ ಮತ್ತು ಬಾಯ್ ಫ್ರೆಂಡ್ ಸೇರಿಕೊಂಡು ಪುತ್ರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆ ಖೋಂಡ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಬಾಲಕಿಯ ಸೋದರತ್ತೆ ಮತ್ತು ಆಕೆಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸಿ ಆರೋಪಗಳನ್ನು ಬಂಧಿಸಲಾಗಿದೆ ಎಂದು ಖೋಂಡ್ವಾ ಠಾಣೆ ಇನ್ಸ್ ಪೆಕ್ಟರ್ ವಿನಾಯಕ ಗಾಯಕ್ ವಾಡ್ ತಿಳಿಸಿದ್ದಾರೆ.