ನಾಗ್ಪುರ: ಕೋವಿಡ್- 19 ಎಂಬ ಮಹಾಮಾರಿ ಎಷ್ಟು ಭಯ ಹುಟ್ಟಿಸಿದೆ ಎಂದರೆ ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ಇದೆ. ಆದರೆ, ನೌಕರಿ ಸೇರಿದಂತೆ ಕೆಲವು ಅನಿವಾರ್ಯ ಕಾರಣಗಳಿಗೆ ಹಲವರು ಹೊರಬಂದರೆ, ಮತ್ತೆ ಕೆಲವರು ಮೋಜು ಮಸ್ತಿಗಾಗಿ ಬರುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಹೀಗಾಗಿ ಪ್ರವಾಸಕ್ಕೆ ಎದುರು ನೋಡುತ್ತಿರುವವರಿಗೆ ಎಲ್ಲೆಲ್ಲಿ ಹೋಗಬಹುದು ಎಂಬ ಬಗ್ಗೆ ನಾಗ್ಪುರ ಪೊಲೀಸರು ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದಾರೆ.
ಕೋವಿಡ್ 19 ಸಂದರ್ಭದಲ್ಲಿ ದೇಶ ಸೇರಿದಂತೆ ವಿದೇಶಗಳಿಗೆ ಪ್ರವಾಸಕ್ಕೆ ಹೋಗಬಹುದಾದರೆ ಯಾವ ದೇಶಕ್ಕೆ ಹೋಗಬಹುದು ಎಂಬ ಬಗ್ಗೆ 12 ಹೆಸರುಗಳ ಪಟ್ಟಿಯನ್ನು ಕೊಟ್ಟು ಅದಕ್ಕೊಂದು ಲೆಕ್ಕ ಇಟ್ಟಿದೆ. ಆ ಲೆಕ್ಕದ ಪ್ರಕಾರ, ನಿಮಗೆ 12ರೊಳಗೆ ಯಾವ ಸಂಖ್ಯೆ ಬರುತ್ತದೋ ಅಲ್ಲಿಗೆ ನೀವು ಹೋಗಬಹುದು ಎಂದು ಹೇಳಿದೆ. ಆದರೆ..…,
ಆದರೆ, ಇಲ್ಲೇ ಇರುವುದು ಟ್ವಿಸ್ಟ್. ಇಲ್ಲಿ ನೀವು ಮೊದಲಿಗೆ 1ರಿಂದ 9 ರೊಳಗಿನ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ಸಂಖ್ಯೆಯನ್ನು 3 ರಿಂದ ಗುಣಿಸಬೇಕು. ಗುಣಿಸಿ ಬರುವ ಸಂಖ್ಯೆಗೆ ಮತ್ತೆ 3 ಸಂಖ್ಯೆಯನ್ನು ಸೇರಿಸಬೇಕು. ಇದರಿಂದ ಬಂದ ಉತ್ತರಕ್ಕೆ ಮತ್ತೆ 3ರಿಂದ ಗುಣಿಸಬೇಕು. ಆಗ ಬರುವ 2 ಡಿಜಿಟ್ ಸಂಖ್ಯೆಯನ್ನು ಪ್ರತ್ಯೇಕಗೊಳಿಸಿ ಕೂಡಿಸಬೇಕು.
ಅಲ್ಲಿ ಬರುವ ಉತ್ತರ ಅಂದರೆ ಸಂಖ್ಯೆಯಲ್ಲಿರುವ ಕಡೆ ನೀವು ಹೋಗಬಹುದು ಎಂದಿದೆ. ಆದರೆ, ನೀವು ಯಾವುದೇ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಂಡು ಹೀಗೆ ಮಾಡಿದರೆ ಬರುವ ಸಂಖ್ಯೆ 9. 9 ಸಂಖ್ಯೆಯಲ್ಲಿರುವುದು ಸ್ಟೇ ಅಟ್ ಹೋಂ (ಮನೆಯಲ್ಲೇ ಇರಿ), ಹೀಗಾಗಿ ನಾಗ್ಪುರ ಪೊಲೀಸರು ಮಾಡಿದ ಈ ಟ್ವೀಟ್ ಸಖತ್ ವೈರಲ್ ಆಗಿದ್ದಲ್ಲದೆ, ನೆಟ್ಟಿಗರಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
https://twitter.com/Amanb2001/status/1280013423409913858?ref_src=twsrc%5Etfw%7Ctwcamp%5Etweetembed%7Ctwterm%5E1280013423409913858%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fmast-joke-maara-nagpur-polices-latest-tweet-decides-your-next-holiday-destination%2F617321