ಜೂನ್ 21 ರ ಇಂದಿನಿಂದ ಕೊರೊನಾ ಹೆಸರಲ್ಲಿ ಭಾರಿ ಪ್ರಮಾಣದಲ್ಲಿ ವಂಚನೆ ನಡೆಯಬಹುದಾದ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿ.ಇ.ಆರ್.ಟಿ. ಎಚ್ಚರಿಕೆ ನೀಡಿದೆ.
ಸರ್ಕಾರದ ಅನುದಾನಿತ ಕೊರೊನಾ ಕಾರ್ಯಕ್ರಮ ಎನ್ನುವಂತೆ ಬಿಂಬಿಸುವ ಕೋವಿಡ್ -19 ಹೆಸರಿನಲ್ಲಿ ವಂಚನೆ ಮಾಡಬಹುದು. ವಿಶ್ವಾಸಾರ್ಹ ಇಮೇಲ್ ಗಳ ರೀತಿಯಲ್ಲಿಯೇ ಇಮೇಲ್ ಗಳನ್ನು ಕಳುಹಿಸಿ ಅವುಗಳನ್ನು ಸ್ವೀಕರಿಸುವವರ ವೆಬ್ಸೈಟ್ ಗಳನ್ನು ಅಥವಾ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿ ವಂಚನೆ ಮಾಡುವ ಹಣಕಾಸಿನ ವಂಚನೆ ಮಾಡುವ ಸಾಧ್ಯತೆ ಇದೆ. ಅದರಲ್ಲೂ ncov2019@gov.in ಎಂಬ ನಕಲಿ ಖಾತೆಯಿಂದ ಈ ವಂಚಕರ ಇ ಮೇಲ್ ಬರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದನ್ನು ನಂಬಿ ಕ್ಲಿಕ್ ಮಾಡಿದರೆ ವಂಚನೆಗೊಳಗಾಗುವುದು ಗ್ಯಾರಂಟಿ ಎನ್ನಲಾಗಿದೆ.
ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾವುದೇ ಅನಪೇಕ್ಷಿತ ಇ-ಮೇಲ್ ಗಳನ್ನು ನಂಬಿ ಓಪನ್, ಕ್ಲಿಕ್ ಮಾಡಬೇಡಿ ಎಂದು ತಿಳಿಸಲಾಗಿದೆ. ವಿಶ್ವಾಸಾರ್ಹತೆ ಹೆಸರಲ್ಲಿ ಜನರನ್ನು ಮೋಸ ಮಾಡುವ ಪಠ್ಯ ಸಂದೇಶಗಳು ಬರುತ್ತವೆ. ದುರುದ್ದೇಶಪೂರಿತ ಲಿಂಕ್ ಗಳನ್ನು ಕ್ಲಿಕ್ ಮಾಡಲು ಪ್ರೇರೇಪಿಸಿ ಬಳಿಕ ವೈಯಕ್ತಿಕ ಮಾಹಿತಿಗೆ ಕ್ನ ಹಾಕಿ ಜನರನ್ನು ಮೋಸಗೊಳಿಸಲಾಗುತ್ತದೆ. ಮಾಲ್ವೇರ್ ಸ್ಥಾಪನೆ ಅಥವಾ ಸಿಸ್ಟಮ್ ಫ್ರೀಜ್ ಮಾಡಿ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಲು ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ.