ಕೊರೊನಾ ಕಾರಣಕ್ಕೆ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸುವುದರಿಂದ ಕೊರೊನಾ ಸಾಂಕ್ರಾಮಿಕ ಸೋಂಕು ಮಾತ್ರವಲ್ಲದೆ, ಕ್ಷಯ (ಟಿಬಿ) ರೋಗದ ಮೂಲೋತ್ಪಾಟನೆ ಆಗಲಿದೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ಜಪಾನ್ ನಂತೆ ಭಾರತದಲ್ಲಿಯೂ ಮುಂದುವರಿಸಿದರೆ, ಕ್ಷಯ ರೋಗದ ವಿರುದ್ಧದ ಹೋರಾಟದಲ್ಲೂ ಭಾರತೀಯರು ಯಶ ಸಾಧಿಸಬಹುದು.
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಇಡೀ ಜಗತ್ತಿನ ಶೇ.25 ರಷ್ಟು ಕ್ಷಯ ರೋಗಿಗಳು ಭಾರತದಲ್ಲೇ ಇದ್ದಾರೆ. ಹೀಗಾಗಿ ಬರುವ 2030 ರ ಒಳಗಾಗಿ ಕ್ಷಯ ರೋಗದ ನಿರ್ಮೂಲನೆ ಆಗಬೇಕೆಂಬ ಗುರಿಯನ್ನೂ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದೆ.
ಆದರೆ, ಹೀಗೇ ಮಾಸ್ಕ್ ಧಾರಣೆ ಮುಂದುವರಿಸಿದರೆ, 2025 ರ ವೇಳೆಗೆ ಕ್ಷಯಮುಕ್ತ ಭಾರತ ನಿರ್ಮಾಣ ಆಗಲಿದೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ. ವಿಶ್ವ ಸಂಸ್ಥೆ ನೀಡಿರುವ ಗಡುವಿಗಿಂತ ಮೊದಲೇ ಕ್ಷಯಮುಕ್ತ ಭಾರತ ನಿರ್ಮಾಣ ಆಗಲಿದೆ. ಆದರೆ, ಅಲ್ಲಿಯವರೆಗೆ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಬೇಕು ಎಂದು ಶ್ವಾಸಕೋಶ ತಜ್ಞ ಡಾ.ಸಂಜೀವ್ ಮೆಹ್ತಾ ವಿಶ್ವಾಸ ವ್ಯಕ್ತಪಡಿಸುತ್ತಾರೆ.