ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಸರಸ್ವತಿ ದೇವಿಯ ಭಾವಚಿತ್ರವಿಟ್ಟು ಪೂಜೆ ಮಾಡಿದ್ದನ್ನು ಖಂಡಿಸಿ ಹಿರಿಯ ಕವಿಯೊಬ್ಬರು ತಮಗೆ ನೀಡಲಾಗಿದ್ದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನಿರಾಕರಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮರಾಠಿ ಕವಿ ಯಶವಂತ ಮನೋಹರ್ ಅವರು ನಾಗಪುರದ ವಿದರ್ಭ ಸಾಹಿತ್ಯ ಸಂಘ ತಮಗೆ ನೀಡಿದ್ದ ಪ್ರಶಸ್ತಿಯನ್ನು ನಿರಾಕರಿಸಿದ್ದು, ದೇವಿ ಸರಸ್ವತಿ ಚಿತ್ರ, ಮಹಿಳೆಯರು ಮತ್ತು ಶೂದ್ರರನ್ನು ಶಿಕ್ಷಣದಿಂದ ಹೊರಗೆ ಇಡುವುದರ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.
ಸರಸ್ವತಿ ಭಾವಚಿತ್ರದ ಬದಲು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರ ಇಡಬಹುದಾಗಿತ್ತು ಎಂದು ಹೇಳಿರುವ ಯಶವಂತ ಮನೋಹರ್, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಧರ್ಮದ ಆಚರಣೆಯನ್ನು ತಾವು ಒಪ್ಪದ ಕಾರಣ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದೇನೆ ಎಂದು ಹೇಳಿದ್ದಾರೆ.