ಮಹಾರಾಜ ದುಲೀಪ್ ಸಿಂಗ್ ಪುತ್ರ ಪ್ರಿನ್ಸ್ ವಿಕ್ಟರ್ ಆಲ್ಬರ್ಟ್ ಜೇ ದುಲೀಪ್ ಸಿಂಗ್ ವಾಸಿಸುತ್ತಿದ್ದ ಲಂಡನ್ ನಲ್ಲಿದ್ದ ಅರಮನೆ 15.5 ಮಿಲಿಯನ್ ಗೆ ಮಾರಾಟವಾಗಿದೆ. ವೈವಾಹಿಕ ಸಂದರ್ಭದಲ್ಲಿ ನೆನಪಿಗಾಗಿ ಈ ಮಹಲನ್ನು ಕೊಡುಗೆಯಾಗಿ ನೀಡಲಾಗಿತ್ತು.
ದುಲೀಪ್ ಸಿಂಗ್, ಮಹಾರಾಜ ರಂಜೀತ್ ಸಿಂಗ್ ಅವರ ಕಿರಿಯ ಮಗ ಮತ್ತು ಲಾಹೋರ್ ಸೇರಿದಂತೆ ಸಿಖ್ ಸಾಮ್ರಾಜ್ಯದ ಕೊನೆಯ ಮಹಾರಾಜನಾಗಿದ್ದರು.
1849 ರಲ್ಲಿ ನಡೆದ ಎರಡನೇ ಆಂಗ್ಲೋ-ಸಿಖ್ ಯುದ್ಧದ ಕೊನೆಯಲ್ಲಿ ಅವರ ಪಟ್ಟ ಮತ್ತು ಅಧಿಕಾರದೊಂದಿಗೆ ಅವರನ್ನು ಪಂಜಾಬ್‌ನಿಂದ ಹೊರಹಾಕಿ ಇಂಗ್ಲೆಂಡ್‌ಗೆ ಗಡಿಪಾರು ಮಾಡಲಾಗಿತ್ತು.
ಪ್ರಿನ್ಸ್ ವಿಕ್ಟರ್ 1866 ರಲ್ಲಿ ಜನಿಸಿದರು. ಪ್ರಿನ್ಸ್ ವಿಕ್ಟರ್ 9ನೇ ಅರ್ಲ್ ಆಫ್ ಕೊವೆಂಟ್ರಿಯ ಮಗಳು ಲೇಡಿ ಆನ್ ಕೋವೆಂಟ್ರಿಯರನ್ನು ವಿವಾಹವಾದರು. ಅಂತರ ಧರ್ಮೀಯ ವಿವಾಹವು ಇಂಗ್ಲಿಷ್ ಸಮಾಜದಲ್ಲಿ ಕೋಲಾಹಲವನ್ನು ಉಂಟುಮಾಡಿತ್ತು. ಇದೇ ವೇಳೆ ಗ್ರೇಸ್ ಎಂಡ್ ಫೇವರ್ ಮಹಲನ್ನು ಅವರು ವೈವಾಹಿಕ ನೆನಪಿಗಾಗಿ ಪಡೆದುಕೊಂಡಿದ್ದರು.