ಮಿಸ್ ಇಂಡಿಯಾ ದೆಹಲಿ 2019ರ ವಿಜೇತೆ ಮಾನ್ಸಿ ಸೇಘಲ್ ಸೋಮವಾರ ರಾಘವ್ ಚಡ್ಡಾ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ದೆಹಲಿ ಜಲಬೋರ್ಡ್ ಉಪ ನಿರ್ದೇಶಕ ರಾಘವ್ ಚಡ್ಡಾ ಈ ವಿಚಾರವಾಗಿ ಮಾತನಾಡಿ, ಆಮ್ ಆದ್ಮಿ ಪಕ್ಷ ಈವರೆಗೆ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ರ ಕಾರ್ಯಕ್ಷಮತೆಯನ್ನ ಕಂಡು ಪ್ರೇರಣೆಗೊಂಡ ಮಾನ್ಸಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದ್ರು.
ಇನ್ನು ಈ ವಿಚಾರವಾಗಿ ಮಾತನಾಡಿದ ಮಾನ್ಸಿ, ನಾನು ಅರವಿಂದ ಕೇಜ್ರಿವಾಲ್ ಸರ್ಕಾರದ ಪ್ರಾಮಾಣಿಕ ಕಾರ್ಯಗಳನ್ನ ಕಂಡು ಸ್ಫೂರ್ತಿ ಪಡೆದಿದ್ದೇನೆ. ಹೀಗಾಗಿ ನಾನು ಆಮ್ ಆದ್ಮಿ ಪಕ್ಷವನ್ನ ಸೇರ್ಪಡೆಯಾಗಿದ್ದೇನೆ. ಶುದ್ಧ ರಾಜಕಾರಣದಿಂದ ನಾವು ಇರುವ ಸಮಾಜವನ್ನ ಬದಲಾಯಿಸಬಹುದು ಎಂಬ ಮಾತಿನಲ್ಲಿ ನನಗೆ ನಂಬಿಕೆ ಇದೆ ಎಂದು ಹೇಳಿದ್ರು.
ಇದೇ ವೇಳೆ ಯುವ ಜನತೆಗೆ ಕರೆ ನೀಡಿದ ಮಾನ್ಸಿ, ನಮ್ಮ ಜೊತೆ ಕೈಜೋಡಿಸಿ ಹಾಗೂ ನಾವು ಯಾವ ಬದಲಾವಣೆ ತರಬೇಕು ಎಂದುಕೊಂಡಿದ್ದೇವೋ ಅದಕ್ಕೆ ಸಾಕ್ಷಿಯಾಗಿ ಎಂದು ಹೇಳಿದ್ರು.
ಮಾನ್ಸಿ ಸೇಘಲ್ ನೇತಾಜಿ ಸುಭಾಷ್ ಚಂದ್ರ ಬೋಸ್ ಇನ್ಸ್ಟಿಟ್ಯೂಟ್ನಿಂದ ಬಿ.ಟೆಕ್ ಪದವಿಯನ್ನ ಪಡೆದಿದ್ದಾರೆ.