ಮುಂಬೈ ಲೋಕಲ್ ರೈಲಿನಲ್ಲಿ 2006ರಲ್ಲಿ ತನ್ನ ಪರ್ಸ್ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ, ಅದು 14 ವರ್ಷಗಳ ಬಳಿಕ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದಾಗ ಬಲು ಅಚ್ಚರಿಯಾಗಿದೆ.
ಹೇಮಂತ್ ಪಡಾಲ್ಕರ್ ಹೆಸರಿನ ಈ ವ್ಯಕ್ತಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ – ಪನ್ವೆಲ್ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪರ್ಸ್ ಕಳೆದುಕೊಂಡಿದ್ದರು ಎಂದು ರೈಲ್ವೇ ಪೊಲೀಸರು ತಿಳಿಸಿದ್ದರು. ಬಳಿಕ ಇತ್ತೀಚೆಗೆ ಅದು ಸಿಕ್ಕಿದ್ದು, ಇದೇ ವೇಳೆ ಕೊರೊನಾ ವೈರಸ್ ಲಾಕ್‌ಡೌನ್ ಇದ್ದ ಕಾರಣದಿಂದ ಪಡಾಲ್ಕರ್ ತಮ್ಮ ಪರ್ಸ್ ಅನ್ನು ಪಡೆದುಕೊಳ್ಳಲು ಆಗಲಿಲ್ಲ.
ಲಾಕ್‌ಡೌನ್ ಮುಗಿದ ಬಳಿಕ ವಾಶಿಯಲ್ಲಿ GRP ಕಾರ್ಯಾಲಯಕ್ಕೆ ತೆರಳಿ, ತಮ್ಮ ಪರ್ಸ್ ಮರಳಿ ಪಡೆದುಕೊಂಡಿದ್ದಾರೆ. ಅವರ ಪರ್ಸ್ ನಲ್ಲಿ 900 ರೂ.ಗಳಿದ್ದು, 100 ರೂ. ಗಳನ್ನು ಸ್ಟಾಂಪ್ ಶುಲ್ಕವಾಗಿ ಕಡಿತ ಮಾಡಿ 300 ರೂ.ಗಳನ್ನು ಪಡಾಲ್ಕರ್ ಪಡೆದುಕೊಂಡಿದ್ದು, ನಿಷೇಧಗೊಂಡಿರುವ 500 ರೂ. ನೋಟನ್ನು ಹೊಸದಕ್ಕೆ ಬದಲಿಸಿಕೊಂಡು ಪಡೆದುಕೊಳ್ಳಲಿದ್ದಾರೆ.