ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ‘ಮನ್ ಕಿ ಬಾತ್’ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ವಿಜಯದಶಮಿ ಹಬ್ಬದ ಶುಭಾಶಯ ಹೇಳಿದ ಮೋದಿ, ಎಲ್ಲರೂ ಕೊರೋನಾ ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ. ಕೊರೊನಾ ಸೋಂಕು ಹರಡದಂತೆ ಮಾಸ್ಕ್ ಬಳಸಿ ನಿಯಮಗಳನ್ನು ಪಾಲಿಸಿ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ರೈತರ ಆದಾಯ ಹೆಚ್ಚಳಕ್ಕೆ ಹೊಸ ಕೃಷಿ ಮಸೂದೆಗಳು ನೆರವಾಗುತ್ತವೆ ಎಂದು ಹೇಳಿದ ಮೋದಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಮತ್ತು ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರನ್ನು ಸ್ಮರಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ದೇಶದ ಏಕತೆಗೆ ಸರ್ದಾರ್ ಪಟೇಲರು ಶ್ರಮಿಸಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅಕ್ಟೋಬರ್ 31 ರಂದು ನಾವು ಕಳೆದುಕೊಂಡಿದ್ದೆವು. ಅವರಿಗೆ ಗೌರವಪೂರ್ವಕ ನಮನಗಳು ಎಂದು ಹೇಳಿದ್ದಾರೆ.
ಅಂಗಡಿಯ ಒಂದು ಭಾಗವನ್ನು ಗ್ರಂಥಾಲಯಕ್ಕೆ ಮೀಸಲಿಟ್ಟ ತಮಿಳುನಾಡಿನ ಫೋನ್ ಮರಿಯಪ್ಪನ್ ಅವರ ಕಾರ್ಯವನ್ನು ಮೋದಿ ಶ್ಲಾಘಿಸಿ ಗಡಿಯಲ್ಲಿರುವ ಯೋಧರಿಗೆ ಮನೆಯಲ್ಲಿ ದೀಪ ಬೆಳಗಬೇಕೆಂದು ತಿಳಿಸಿದ್ದಾರೆ.