ನಮ್ಮ ದೇಶದಲ್ಲಿ ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ಶೇಖರಿಸಿಟ್ಟುಕೊಳ್ಳುವುದು ವಾಡಿಕೆ. ಆದರೆ ವ್ಯಕ್ತಿಯೊಬ್ಬ ನಿತ್ಯ ಅಕ್ಕಿ ತರುವ ಬದಲು, ಹೋಲ್ ಸೇಲ್ ಆಗಿ ತರಲು ಹೋಗಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.
ಹೌದು, ಈ ಬಗ್ಗೆ ಶಿವ್ ರಾಮದಾಸ್ ಎನ್ನುವವರು ಟ್ವೀಟ್ ಮಾಡಿದ್ದು ತಮ್ಮ ಭಾವ ಅಕ್ಕಿ ತರಲು ಹೇಳಿದರೆ, ಅಕ್ಕಿ ರಾಶಿ ಹಾಕಿಸಿದ ಘಟನೆ ಬಗ್ಗೆ ವಿವರಿಸಿದ್ದಾರೆ.
ಅಂಗಡಿಯೊಂದಕ್ಕೆ ಕರೆ ಮಾಡಿ ಅಕ್ಕಿ ಚೀಲ ಕಳುಹಿಸಲು ಹೇಳಿದ್ದಾರೆ. ಆದರೆ ಈ ವೇಳೆ ಗೊಂದಲವಾಗಿ ಅಕ್ಕಿ ಚೀಲವನ್ನು ಹೊತ್ತ ಲಾರಿ ಇವರ ಮನೆ ಮುಂದೆ ಬಂದು ನಿಂತಿದೆ. ಇದನ್ನು ನೋಡಿದ ವ್ಯಕ್ತಿ ಶಾಕ್ ಆಗಿ, ತಮಗಿಷ್ಟು ಅಕ್ಕಿ ಬೇಡ ಎಂದರೂ ಲಾರಿ ಚಾಲಕ ಕೇಳಲಿಲ್ಲವಂತೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಶಿವು ಅವರು, ಭಾವನ ಪರಿಸ್ಥಿತಿಯ ಬಗ್ಗೆ ನೇರ ಪ್ರಸಾರದ ರೀತಿ ವಿವರಣೆ ನೀಡುತ್ತ ಹೋಗಿದ್ದಾರೆ. ಈ ಘಟನೆಯಿಂದ ನನ್ನ ಅಕ್ಕ ಕೋಪಗೊಂಡಿದ್ದಳು ಎನ್ನುವ ಮಾತನ್ನು ಹೇಳಿದ್ದಾರೆ. ಲಾರಿ ಚಾಲಕ ಹಾಗೂ ವ್ಯಕ್ತಿಯ ನಡುವೆ ಭಾರಿ ವಾದ ವಿವಾದವಾಗಿ ಮಾಲೀಕರಿಗೆ ಕರೆ ಮಾಡಿದರೆ ಆತ ಕರೆ ಸ್ವೀಕರಿಸಿಲ್ಲ. ಕೊನೆಗೆ ಮನು ಎನ್ನುವವರು 23 ಚೀಲ ಅಕ್ಕಿ ತೆಗೆದುಕೊಳ್ಳಬೇಕು. ಇದರೊಂದಿಗೆ ಲಾರಿ ಚಾಲಕನಿಗೆ ಓಲ್ಡ್ ಮಾಂಕ್ ರಮ್ ಹಾಗೂ ಸಿಗರೇಟ್ ಕೊಡಿಸಬೇಕು ಎಂದು ಒಪ್ಪಂದವಾಗಿದೆ. ಆದರೆ ಅಂತಿಮವಾಗಿ 23 ಅಕ್ಕಿ ಚೀಲವನ್ನು ವ್ಯಕ್ತಿಯೇ ಹೊತ್ತು ಹಾಕಿದ್ದಾನೆ ಎಂದು ಹೇಳಿ ಕಥೆಯನ್ನು ಮುಗಿಸಿದ್ದಾರೆ. ಇದೀಗ ಈ ಟ್ವೀಟರ್ ಥ್ರೆಡ್ ಭಾರಿ ವೈರಲ್ಆಗಿದೆ.