alex Certify ಊಟ ತರಲು ವಿಳಂಬ ಮಾಡಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಪಾಪಿ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟ ತರಲು ವಿಳಂಬ ಮಾಡಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಪಾಪಿ ಪುತ್ರ

35 ವರ್ಷದ ಕುಡುಕನೊಬ್ಬ ಊಟ ಕೋಡೋಕೆ ವಿಳಂಬ ಮಾಡಿದಳು ಎಂಬ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಪಶ್ಚಿಮ ಸಿಂಗ್​ಭಮ್​ ಜಿಲ್ಲೆಯ ಚಾಯ್​ಬಾಸಾದ ಮಾಹೋರ್​ಪುರ ಬ್ಲಾಕ್​ನಲ್ಲಿ ಈ ಅಮಾನುಷ ಕೃತ್ಯ ನಡೆದಿದೆ.

ಕೊಲೆಗೈದ ಆರೋಪಿಯನ್ನ ಪ್ರಧಾನ್​ ಸೋಯ್​ ಎಂದು ಗುರುತಿಸಲಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಈತ 60 ವರ್ಷದ ತಾಯಿ ಸುಮಿ ಎಂಬವರ ಜೊತೆ ವಾಸಿಸುತ್ತಿದ್ದ ಎನ್ನಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಗಂಡನ ಮನೆಯವರಿಂದಲೇ ಕೊಲೆ ಆರೋಪ

ನಾವು ಸ್ಥಳಕ್ಕೆ ತೆರಳುವಷ್ಟರ ಹೊತ್ತಿಗೆ ಪವನ್​ ಅಲಿಯಾಸ್​ ಪ್ರಧಾನ್​ ಸೋಯ್​ ತನ್ನ ತಾಯಿಯನ್ನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಅಂತ್ಯಕ್ರಿಯೆಗೂ ತಯಾರಿ ಮಾಡಿದ್ದ. ವಿಚಾರಣೆಯ ವೇಳೆ ಶುಕ್ರವಾರ ರಾತ್ರಿ ಕುಡಿದು ಮನೆಗೆ ಬಂದಿದ್ದ ಈತ ತಾಯಿಗೆ ಊಟ ಬಡಿಸುವಂತೆ ಹೇಳಿದ್ದಾನೆ. ಆದರೆ ಊಟ ತರಲು ಸುಮಿ ವಿಳಂಬ ಮಾಡುತ್ತಿದ್ದಂತೆಯೇ ಆಕೆಯನ್ನ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನ ಬಂಧಿಸಿದ್ದು ತನಿಖೆ ಮುಂದುವರಿದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...