ನಾವು ಮಾಡುವ ಒಂದು ಸೇವೆ ಇತರರ ಜೀವನವನ್ನು ಉತ್ತಮ ಮಾಡಬಲ್ಲದು. ಅದರಲ್ಲೂ ಮೆಡಿಕಲ್ ಎಮರ್ಜೆನ್ಸಿಯ ಈ ಸಂದರ್ಭದಲ್ಲಿ ಇನ್ನೊಬ್ಬರಿಗೆ ಸಹಾಯ ಅನುಭೂತಿ ತೋರಿಸುವುದು ಅತಿ ಮುಖ್ಯವಾಗಿದೆ. ಕೇವಲ ಮನುಷ್ಯರಿಗೆ ಮಾತ್ರವಲ್ಲ. ತಮ್ಮ ಕಷ್ಟ ಹೇಳಿಕೊಳ್ಳಲಾಗದ ಮೂಕ ಪ್ರಾಣಿಗಳಿಗೂ ಸಹಾಯ ಹಸ್ತ ಬೇಕಿದೆ.
ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟ್ಟರ್ ನಲ್ಲಿ ಹಾಕಿರುವ ವಿಡಿಯೋವೊಂದು ಮಾನವೀಯತೆಯ ಮುಖವನ್ನು ತೋರಿಸಿದೆ. ವಿಡಿಯೋ ಒಟ್ಟಾರೆ ಐದು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ಮೈಯ್ಯೆಲ್ಲ ಒದ್ದೆಯಾಗಿ ಬಸ್ ತಂಗುದಾಣದಲ್ಲಿ ನಡುಗುತ್ತ ಮಲಗಿದ್ದ ನಾಯಿಗೆ ವ್ಯಕ್ತಿಯೊಬ್ಬ ತನ್ನ ಜಾಕೆಟ್ ಅಥವಾ ನಡುವಿನ ಅಂಗಿಯನ್ನು ತೆಗೆದು ತೊಡಿಸುತ್ತಾನೆ. ಅತ್ಯಂತ ಪ್ರೀತಿಯಿಂದ ಅದರ ಮೈದಡವುತ್ತಾನೆ. “ಯಾರು ಅತ್ಯಂತ ಕೆಳ ಸ್ಥರದಲ್ಲಿರುತ್ತಾರೋ ಅವರು ಒಮ್ಮೆ ಉನ್ನತವಾದದ್ದನ್ನು ನೀಡುತ್ತಾರೆ. ಈ ಮನುಷ್ಯನ ಹೃದಯ ಬಂಗಾರದಂಥದ್ದು, ಬಸ್ ನಿಲ್ದಾಣದಲ್ಲಿ ನಡುಗುತ್ತ ನಿಂತ ನಾಯಿ ನೋಡಿ ತನ್ನ ಅಂಗಿ ತೆಗೆದು ತೊಡಿಸಿದ್ದಾನೆ” ಎಂದು ಸುಶಾಂತ್ ಅವರು ಕ್ಯಾಪ್ಶನ್ ನೀಡಿದ್ದಾರೆ.