ಒಂದೇ ಬೆರಳಿನ ಮೇಲೆ ಫುಟ್ಬಾಲ್ ಗಿರಗಿರ ತಿರುಗಿಸಿಕೊಂಡು ಬ್ಯಾಲೆನ್ಸ್ ಮಾಡುವುದು ನಮ್ಮಲ್ಲಿ ಅನೇಕರಿಗೆ ಬಹಳ ಮೆಚ್ಚಿನ ವಿಚಾರ ಅಲ್ಲವೇ? ಬಹಳ ಅಭ್ಯಾಸ ಮಾಡಿದ ಮೇಲೆ ಈ ಕೌಶಲ್ಯವನ್ನು ನಮ್ಮದಾಗಿಸಿಕೊಳ್ಳಬಹುದು.
ಇದೇ ಟ್ರಿಕ್ಕನ್ನು ಬಹಳ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿರುವ ವ್ಯಕ್ತಿಯೊಬ್ಬ ಒಮ್ಮೆಲೇ ಐದು ಫುಟ್ಬಾಲ್ಗಳನ್ನು ತಿರುಗಿಸಿಕೊಂಡು ಬ್ಯಾಲೆನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಫಾ ಮೇಲೆ ಮಲಗಿರುವ ಈತ, ತನ್ನ ಬಾಯಿಯಲ್ಲಿ ಕಡ್ಡಿಯೊಂದನ್ನು ಕಚ್ಚಿಕೊಂಡು ಅದರ ಮೇಲೊಂದು ಫುಟ್ಬಾಲ್ ಬ್ಯಾಲೆನ್ಸ್ ಮಾಡುತ್ತಿರುವುದಲ್ಲದೇ, ಇದೇ ವೇಳೆ ಮಂಡಿಗಳು ಹಾಗೂ ಪಾದಗಳ ಮೇಲೆ ಇನ್ನೂ ನಾಲ್ಕು ಫುಟ್ಬಾಲ್ಗಳನ್ನು ಆಡಿಸುತ್ತಿರುವ ದೃಶ್ಯಾವಳಿಯನ್ನು ನೋಡಬಹುದಾಗಿದೆ. ಇಷ್ಟೆಲ್ಲಾ ಮಾಡುತ್ತಿರುವುದಲ್ಲದೇ, ಇದೇ ವೇಳೆ ತನ್ನ ಕೈಯಿಂದ ಫೋನ್ ಸಹ ಆಪರೇಟ್ ಮಾಡುತ್ತಿದ್ದಾನೆ ಈತ.
https://www.instagram.com/p/CE2NBioDsTI/?utm_source=ig_web_copy_link