ಹಿಮಾಚಲಪ್ರದೇಶದ ರುದ್ರ ರಮಣೀಯ ಎಂಟು ಸಾವಿರ ಅಡಿ ಎತ್ತರದಲ್ಲಿ ಪ್ಯಾರಾಗ್ಲೈಡಿಂಗ್ ಸಾಹಸದಲ್ಲಿ ತೊಡಗಿದ್ದ ವ್ಯಕ್ತಿ, ಭಾವಪರವಶರಾಗಿ ‘ಮಾ ತುಜೇ ಸಲಾಂ’ ಹಾಡು ಹಾಡಿರುವ ವಿಡಿಯೋ ವೈರಲ್ ಆಗಿದೆ.
ರೂಪೇಶ್ ಮೈಟಿ ಎಂಬುವರು ಹಿಮಾಚಲ ಪ್ರದೇಶದ ಬಿರ್ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಗಿಟಾರ್ ನುಡಿಸುತ್ತಾ ಜನಪ್ರಿಯ ಹಾಡು ‘ಮಾ ತುಜೇ ಸಲಾಮ್’ ಅನ್ನು ಹಾಡಿದ್ದು ನೆಟ್ಟಿಗರನ್ನು ಮುದಗೊಳಿಸಿದೆ.
ಎ.ಆರ್. ರೆಹಮಾನ್ ಸಂಯೋಜಿಸಿದ ‘ಮಾ ತುಜೇ ಸಲಾಮ್’ ಹಾಡಿನೊಂದಿಗೆ ಹಿಮಾಚಲದ ರಮಣೀಯ ಸೌಂದರ್ಯವು ವಿಡಿಯೊದಲ್ಲಿ ಕಾಣಬಹುದಾಗಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ರೂಪೇಶ್ ಅವರ ಸಾಹಸ ಪ್ರದರ್ಶನವನ್ನು ನೋಡಿ ನೆಟ್ಟಿಗರು ಖುಷಿಪಟ್ಟಿದ್ದಾರೆ.
https://www.instagram.com/p/CNE1YaaDajd/?utm_source=ig_web_copy_link