ವರದಕ್ಷಿಣೆ ರೂಪದಲ್ಲಿ ಬಂದಿತ್ತಂತೆ ರೈಲು….! ಅದನ್ನು ನಿರಾಕರಿಸಿದ್ದರ ಹಿಂದಿದೆ ಈ ಕಾರಣ 30-04-2021 3:35PM IST / No Comments / Posted In: Latest News, India ಸೋಶಿಯಲ್ ಮೀಡಿಯಾದಲ್ಲಿ ಫನ್ನಿ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತೆ . ಕೆಲವೊಂದು ವಿಡಿಯೋಗಳಂತೂ ಹೊಟ್ಟೆ ಹುಣ್ಣಾಗುವಂತೆ ನಗುವಷ್ಟು ತಮಾಷೆಯನ್ನ ಹೊಂದಿರುತ್ತವೆ . ಇದೇ ಸಾಲಿಗೆ ಇದೀಗ ಇನ್ನೊಂದು ವಿಡಿಯೋ ಸೇರಿದ್ದು ಇದರಲ್ಲಿ ವ್ಯಕ್ತಿಯೊಬ್ಬ ನನಗೆ ವರದಕ್ಷಿಣೆ ರೂಪದಲ್ಲಿ ರೈಲು ಕೊಡುತ್ತೇನೆ ಎಂದರು. ಆದರೆ ನಾನೇ ಒಪ್ಪಿಲ್ಲ ಎಂದು ಹೇಳಿದ್ದಾನೆ. 30 ಸೆಕೆಂಡ್ಗಳ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ನಿಂಗೆನೋ ವರದಕ್ಷಿಣೆ ರೂಪದಲ್ಲಿ ರೈಲು ಸಿಗೋದಿತ್ತಂತೆ ಹೌದಾ..? ಎಂದು ಕೇಳಿದ್ದಾರೆ.ಇದಕ್ಕೆ ಉತ್ತರಿಸಿದ ಇನ್ನೊಬ್ಬ ವ್ಯಕ್ತಿ ಹಾ….. ಹೌದು ಎಂದು ಹೇಳಿದ್ದಾನೆ. ಅಂದಹಾಗೆ ಈತ ರೈಲು ತೆಗೆದುಕೊಳ್ಳಲು ಏಕೆ ನಿರಾಕರಿಸಿದ ಎಂಬುದಕ್ಕೂ ಕಾರಣ ನೀಡಿದ್ದಾನೆ. ರೈಲು ಪಾರ್ಕ್ ಮಾಡೋಕೆ ಜಾಗವಿಲ್ಲದ ಕಾರಣ ತಾನು ರೈಲು ತೆಗೆದುಕೊಳ್ಳಲು ನಿರಾಕರಿಸಿದೆ ಎಂದು ಹೇಳಿದ್ದಾನೆ. ನನಗೆ ರೈಲನ್ನ ಚಲಾಯಿಸೋಕೆ ಬರಲ್ಲ. ಸಣ್ಣ ವಾಹನಗಳಾದ್ರೆ ಚಲಾಯಿಸುತ್ತಿದ್ದೆ. ಆದರೆ ಇದನ್ನ ಚಲಾಯಿಸೋಕೆ ಬರೋದಿಲ್ಲ ಎಂದು ಹೇಳಿದ್ದಾನೆ. ಅಲ್ಲದೇ ನಾನದನ್ನ ಎಲ್ಲಿ ನಿಲ್ಲಿಸೋದು ಎಂತಲೂ ಕೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 🤣🤣🤣🤣🤕🤕🤣😭😭 pic.twitter.com/a1RaPIUhUp — Raja Babu (@GaurangBhardwa1) April 11, 2021