ತಾಯಿ ಹಚ್ಚಿದ್ದ ಲಿಪ್ಸ್ಟಿಕ್ ಗೆ ಕುಟುಂಬಸ್ಥರು ಕೆಟ್ಟದಾಗಿ ಕಮೆಂಟ್ ಮಾಡಿದ್ದನ್ನ ವಿರೋಧಿಸಿದ ಪುತ್ರ ತಾನೇ ಲಿಪ್ಸ್ಟಿಕ್ ಹಾಕಿ ಮೇಕಪ್ ಮಾಡಿಕೊಂಡು ಫೇಸ್ಬುಕ್ನಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಕೊಲ್ಕತ್ತಾ ನಿವಾಸಿಯಾದ ಪುಷ್ಪಕ್ ಸೇನ್ ಈ ರೀತಿಯ ಫೋಟೋಗಳನ್ನ ಶೇರ್ ಮಾಡಿದ್ದಾರೆ. 54 ವರ್ಷದ ನನ್ನ ಅಮ್ಮ ಕುಟುಂಬದ ಕಾರ್ಯಕ್ರಮವೊಂದಕ್ಕೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಹಾಕಿ ಹೋಗಿದ್ದಾರೆ ಎಂಬ ಕಾರಣಕ್ಕೆ ಅನೇಕರು ಅವರನ್ನ ನಿಂದಿಸಿದ್ರು.
ಹೀಗಾಗಿ ತಮ್ಮ ಬಿಯರ್ಡ್ ಮುಖಕ್ಕೆ ಮೇಕಪ್ ಬಳಿದುಕೊಂಡ ಪುಷ್ಪಕ್ ಇನ್ನಾದರೂ ಹುಷಾರಾಗಿ ಅಂತಾ ಕುಟುಂಬಸ್ಥರಿಗೆ ಸಲಹೆ ನೀಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ 25 ವರ್ಷದ ಪುಷ್ಪಕ್, ಈ ಫೋಟೋಗಳ ಮೂಲಕ ನನ್ನ ಕುಟುಂಬಸ್ಥರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದೇನೆ ಎಂದು ಭಾವಿಸುತ್ತೇನೆ. ನನ್ನ ಕುಟುಂಬದ ವಿಚಾರಕ್ಕೆ ಅನಗತ್ಯವಾಗಿ ಬಂದರೆ ಅದನ್ನ ಸಹಿಸಲ್ಲ ಅಂತಾ ಹೇಳಿದ್ದಾರೆ.