ಅನೇಕ ಮಂದಿಗೆ ಮಾರುಕಟ್ಟೆಗೆ ಬರುವ ಹೊಸ ಹೊಸ ವಾಹನಗಳ ಖರೀದಿ ಕ್ರೇಜ್ ಇದ್ದರೆ ಮತ್ತೊಂದಿಷ್ಟು ಮಂದಿಗೆ ವಾಹನಗಳ ನಂಬರ್ ಅಂದರೆ ಫ್ಯಾನ್ಸಿ ನಂಬರ್ ಹಾಕಿಸಬೇಕು ಎಂಬ ಕ್ರೇಜ್ ಇದ್ದೇ ಇರುತ್ತೆ. ಇದಕ್ಕಾಗಿಯೇ ವಾಹನಗಳ ಬೆಲೆಗಿಂತ ಹೆಚ್ಚು ಖರ್ಚು ಮಾಡೋದನ್ನ ನೋಡಿದ್ದೇವೆ. ಇದೀಗ ಅದೇ ತರಹ ಇಲ್ಲೊಬ್ಬ ವ್ಯಕ್ತಿ ವಾಹನದ ಬೆಲೆಗಿಂತ ಮೂರ್ನಾಲ್ಕು ಪಟ್ಟು ಫ್ಯಾನ್ಸಿ ನಂಬರ್ ಗೆ ಖರ್ಚು ಮಾಡಿದ್ದಾರೆ.
ಹೌದು, ಹಿಮಾಚದ ಪ್ರದೇಶದ ವ್ಯಕ್ತಿಯೊಬ್ಬ ತನ್ನ 50 ಸಾವಿರ ರೂ. ಬೆಲೆ ಬಾಳುವ ಸ್ಕೂಟರ್ ಗೆ ಫ್ಯಾನ್ಸಿ ನಂಬರ್ ಹಾಕಿಸಬೇಕೆಂದು 8.1 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಹೆಚ್ಪಿ90-0009 ನಂಬರ್ ಪಡೆಯಲು ಲಕ್ಷಗಟ್ಟಲೆ ಹಣ ವೆಚ್ಚ ಮಾಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಕಾಂಗಡಾದ ರಾಹುಲ್ ಪ್ರೈಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೂಲಕ ಲಕ್ಷಗಟ್ಟಲೆ ಹಣ ಖರ್ಚು ಮಾಡಿದ್ದಾನೆ.
ಒಂದು ಕಡೆ ಶಾಕ್ ಆದರೂ ಇದು ಸತ್ಯ. ಕೆಲವೊಮ್ಮೆ ತಮಗೆ ಬೇಕಾದ ನಂಬರ್ ಗಾಗಿ ಲಕ್ಷಗಟ್ಟಲೆ ಖರ್ಚು ಮಾಡುವ ಜನ ಇನ್ನೂ ಇದ್ದಾರೆ ಅನ್ನೋದೆ ವಿಪರ್ಯಾಸ.