ಅಮೆಜಾನ್ ನಲ್ಲಿ 300 ರೂ.ಗಳ ಚರ್ಮದ ಲೋಷನ್ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ 19,000 ರೂ.ಗಳ ಹೆಡ್ ಫೋನ್ ಡೆಲಿವರಿ ಮಾಡಲಾಗಿರುವುದಲ್ಲದೇ, ಅದನ್ನು ರಿಪ್ಲೇಸ್ ಮಾಡಿಕೊಡಲು ಅಮೆಜಾನ್ ಹಿಂದೇಟು ಹಾಕಿದೆ.
ಗೌತಮ್ ಎಂಬ ಗ್ರಾಹಕರಿಗೆ ಈ ಅನುಭವವಾಗಿದ್ದು, ಅವರು ಈ ವಿಚಾರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮಗೆ ಸಿಕ್ಕ ವಸ್ತುವಿನ ಬಗ್ಗೆ ಅಮೆಜಾನ್ ಗ್ರಾಹಕ ಸೇವಾ ಡೆಸ್ಕ್‌ಗೆ ಕರೆ ಮಾಡಿ ತಿಳಿಸಿದ್ದು, ಆರ್ಡರ್ ಅನ್ನು ಮರಳಿ ಪಡೆಯಲು ಸಾಧ್ಯವಿಲ್ಲದ ಕಾರಣ ತಮ್ಮಲ್ಲಿಯೇ ಇಟ್ಟಕೊಳ್ಳಲು ಪ್ರತಿಕ್ರಿಯೆ ಸಿಕ್ಕಿದೆ.
ತಮಗೆ ಪ್ಯಾಕೇಜ್‌ನಲ್ಲಿ ಬಂದ ಡಿಟರ್ಜೆಂಟ್ ಹಾಗೂ ಹೆಡ್‌ಫೋನ್‌ಗಳ ಫೋಟೋವೊಂದನ್ನು ಗೌತಮ್ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಸ್ಕಿನ್ ಲೋಷನ್‌ನ ಹಣವೂ ಸಹ ಅವರಿಗೆ ಮರಳಿ ನೀಡಲಾಗಿದೆ.