ಪಶ್ಚಿಮ ಬಂಗಾಳದಲ್ಲಿ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತಾಯಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ, ತಾಯಿ ಶವವನ್ನು ಬೆಡ್ ರೂಮಿನಲ್ಲಿ ಹೂತಿಟ್ಟಿದ್ದಾನೆ. ಎರಡು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಪೂರ್ವ ಬುರ್ದ್ವಾನ್ ಜಿಲ್ಲೆಯಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ತಾಯಿ ಹತ್ಯೆ ಮಾಡಿದ್ದಾನೆ. ಮೃತ ಮಹಿಳೆ ಸುಕ್ರನ್ ಬೀಬಿ ಕಿರಿಯ ಮಗ ಸಹಿದುಲ್ ಶೇಖ್ ಅಲಿಯಾಸ್ ನಯನ ಹತ್ಯೆ ಮಾಡಿದ ಆರೋಪಿ. ಜನವರಿ 10, 2019 ರಂದು, ಶೇಖ್ ತಾಯಿ ಹತ್ಯೆ ಮಾಡಿದ್ದಾನೆ. ತಾಯಿ, ಆಗಾಗ ಪ್ರವಾಸಕ್ಕೆ ಹೋಗ್ತಿದ್ದಳು ಎನ್ನಲಾಗಿದೆ. ಘಟನೆ ನಡೆದ ದಿನ ಕೂಡ ಪ್ರಯಾಣದ ಪ್ಲಾನ್ ಮಾಡಿದ್ದಳು. ಇದ್ರಿಂದ ಕೋಪಗೊಂಡ ಶೇಖ್, ತಲೆಯ ಮೇಲೆ ಹೊಡೆದಿದ್ದಾನೆ. ನಂತ್ರ ಕತ್ತು ಹಿಸುಕಿದ್ದಾನೆ.
ಹತ್ಯೆ ಸಮಯದಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ತಾಯಿ ಹತ್ಯೆ ನಂತ್ರ, ಬೆಡ್ ರೂಮಿನಲ್ಲಿ ಹೂತಿದ್ದಾನೆ. ಹೂತ ಜಾಗದಲ್ಲಿ ಪ್ರತಿ ದಿನ ಅಗರಬತ್ತಿ ಹಚ್ಚುತ್ತಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಪತ್ನಿ ಹಾಗೂ ಶೇಖ್ ಮಧ್ಯೆ ಗಲಾಟೆ ನಡೆದಿದೆ. ಪತ್ನಿ, ತವರಿಗೆ ಬಂದಿದ್ದಾಳೆ. ಈ ವೇಳೆ ಆಕೆ ಪತಿ ಸತ್ಯವನ್ನು ಪೊಲೀಸ್ ಮುಂದಿಟ್ಟಿದ್ದಾಳೆ. ಬಲವಂತವಾಗಿ ಶಾರೀರಿಕ ಸಂಬಂಧ ಬೆಳೆಸುತ್ತಿದ್ದ ವ್ಯಕ್ತಿ, ತಾಯಿಯಂತೆ ನಿನ್ನ ಹತ್ಯೆ ಮಾಡಿ, ಹೂಳುವುದಾಗಿ ಬೆದರಿಸುತ್ತಿದ್ದನಂತೆ. ತಾಯಿ ನಾಪತ್ತೆಯಾಗಿದ್ದಾಳೆಂದು ಹಿರಿ ಮಗ ದೂರು ನೀಡಿದ್ದನಂತೆ. ಆದ್ರೆ ಆಕೆ ಬಗ್ಗೆ ಯಾವುದೇ ಸುಳಿವು ಈವರೆಗೆ ಸಿಕ್ಕಿರಲಿಲ್ಲ. ಮನೆಯ ಬೆಡ್ ರೂಮಿನಲ್ಲಿ ಮೂಳೆಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.