ಕೊರೊನಾ ಓಡಿಸಲು ಬಿಸಿನೀರು, ಉಗಿ ಉಪಯುಕ್ತ ಎಂಬುದು ಎಲ್ಲರಿಗೂ ತಿಳಿದಿದೆ. ವ್ಯಕ್ತಿಯೊಬ್ಬರು ಆವಿ ಅಥವಾ ಉಗಿ ಪಡೆಯಲು ಮನೆಯಲ್ಲಿರುವ ಕುಕ್ಕರ್ ಬಳಸಿ ಮಾಡಿದ ಹೊಸ ವಿಧಾನ ಅಂತರ್ಜಾಲದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ.
ವಿನೀತ್ 10 ಎಂಬ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಆದ ವಿಡಿಯೋದಲ್ಲಿ ಮಹಿಳೆಯೊಬ್ಬರು ಉಗಿ ಪಡೆಯುವ ವಿಧಾನದ ಬಗ್ಗೆ ವಿವರಿಸುತ್ತಾರೆ. 60 ಸೆಕೆಂಡ್ ನ ವಿಡಿಯೋ 15,600 ರಷ್ಟು ವೀಕ್ಷಣೆ ಪಡೆದಿದೆ.
ಒಂದು ಪ್ರೆಶರ್ ಕುಕ್ಕರಿನಲ್ಲಿ ಅರ್ಧ ನೀರು ತುಂಬಿ ಸ್ಟೌ ಉರಿ ಹಚ್ಚಿ ಮೇಲೆ ಇರಿಸಲಾಗಿದೆ. ಕುಕ್ಕರ್ ನ ವೇಟ್ ಹಾಕುವ ನಳಿಕೆಗೆ ವಾಟರ್ ಫಿಲ್ಟರ್ ನ ಪೈಪ್ ಜೋಡಿಸಲಾಗಿದೆ. ಪೈಪ್ ನ ಇನ್ನೊಂದು ತುದಿಗೆ ಮತ್ತೊಂದು ಕುಕ್ಕರ್ ನ ಮುಚ್ಚಳ ಜೋಡಿಸಲಾಗಿದೆ. ನೀರು ಕಾಯುತ್ತಿದ್ದಂತೆ ಉಗಿ ಪೈಪ್ ಮೂಲಕ ಹೋಗುತ್ತದೆ. ಉಗಿಯನ್ನು ಮುಖಕ್ಕೆ, ಮೈಗೆಲ್ಲ ತೆಗೆದುಕೊಳ್ಳಬಹುದು. ಇದರಿಂದ ಸ್ಯಾನಿಟೈಸ್ ಮಾಡಿದಂತಾಗುತ್ತದೆ. ಕೊರೊನಾ ಓಡಿಸುವ ಈ ವಿಧಾನದ ಬಗ್ಗೆ ನೆಟ್ಟಿಗರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
https://twitter.com/vineet10/status/1308752026096943104?ref_src=twsrc%5Etfw%7Ctwcamp%5Etweetembed%7Ctwterm%5E1308752026096943104%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fman-inhales-steam-from-a-pressure-cooker-using-an-ro-pipe-to-combat-covid-19-does-the-method-work%2F657603