ಜಾಲತಾಣದಲ್ಲಿ ಪರಿಚಿತಳಾದ ಬಾಲಕಿಯ ನೋಡಲು ಹೋಗಿ ಯುವಕನೊಬ್ಬ ಸಂಕಷ್ಟಕ್ಕೆ ಸಿಲುಕಿದ್ದಾನೆ. ಉತ್ತರ ಪ್ರದೇಶ ಮೂಲದ ಸಲ್ಮಾನ್ (21) ಬೆಂಗಳೂರಿನಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ. ಜಾಲತಾಣದಲ್ಲಿ ಉತ್ತರ ಪ್ರದೇಶದ ಅಪ್ರಾಪ್ತೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ.
ಆಕೆಯ ಹುಟ್ಟು ಹಬ್ಬ ಎಂದು ಅರಿತ ಆತ, ಬೆಂಗಳೂರಿನಿಂದ ಲಕ್ನೋಗೆ ವಿಮಾನವೇರಿ ತೆರಳಿದ್ದಾನೆ. ಸಾಲದ್ದಕ್ಕೆ ಆಕೆಯನ್ನು ಭೇಟಿ ಮಾಡಿ, ಉಡುಗೊರೆ ನೀಡಿ, ಶುಭಾಶಯ ಕೋರಲೂ ಪ್ರಯತ್ನಿಸಿದ್ದಾನೆ.
ಅಪರಿಚಿತನ ಈ ವರ್ತನೆಯಿಂದ ಗಾಬರಿಗೊಂಡ ಅಪ್ರಾಪ್ತೆಯ ಪೋಷಕರು ಪೊಲೀಸರನ್ನು ಕರೆಸಿದ್ದಾರೆ. ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ವೃತ್ತಾಂತ ವಿವರಿಸಿದ ಸಲ್ಮಾನ್, ಜಾಲತಾಣದಲ್ಲಿ ಪರಿಚಿತಳಾದ ಆಕೆಗಾಗಿ ಚಾಕೊಲೇಟ್, ಟೆಡ್ಡಿ ಬೇರ್ ಸೇರಿದಂತೆ ಇನ್ನಿತರ ಗಿಫ್ಟ್ ಕೊಟ್ಟು ಶುಭ ಕೋರುವುದಷ್ಟೇ ತನ್ನ ಉದ್ದೇಶವಾಗಿತ್ತು. ಮರುದಿನವೇ ಬೆಂಗಳೂರಿಗೆ ಮರಳಲು ಮಾಡಿಸಿದ್ದ ರಿಟರ್ನ್ ಟಿಕೆಟ್ ಮತ್ತು ಹಣ ಕೂಡ ತೋರಿಸಿದ್ದಾನೆ.
ಆದರೂ ಅನುಮಾನಗೊಂಡ ಪೋಷಕರು, ದೂರು ದಾಖಲಿಸಿದಯೇ, ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ಕೊಟ್ಟು ಬಿಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರಿಂದ ಸಿಆರ್ಪಿಸಿ ಸೆಕ್ಷನ್ 151 ರ ಅನ್ವಯ ಪ್ರಕರಣ ದಾಖಲಿಸಿಕೊಂಡು ವೈಯಕ್ತಿಕ ಬಾಂಡ್ ಮೇಲೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.