ಜಾರ್ಜಿಯಾದಲ್ಲಿ ಪೊಲೀಸರು ತಮ್ಮ ಕಾರನ್ನ ಬೆನ್ನಟ್ಟುತ್ತಿದ್ದ ವೇಳೆ ಕಾರಿನಲ್ಲಿದ್ದ ಮರಿಜುವಾನಾವನ್ನ ತಾವೇ ತಿನ್ನುವ ಮೂಲಕ ದಂಪತಿ ಸಾಕ್ಷ್ಯನಾಶ ಮಾಡಲು ಯತ್ನಿಸಿದ್ದಾರೆ. ಕಾರಿನಲ್ಲಿದ್ದ 22 ವರ್ಷದ ಮಹಿಳೆ ಸಾಕ್ಷ್ಯ ನಾಶ ಮಾಡಬೇಕು ಎಂದು ಮರಿಜುವಾನಾ ಗಿಡಗಳನ್ನ ತಾನೇ ನುಂಗಿದ್ದಾಳೆ. ಈಕೆಯ ಈ ಕೆಲಸಕ್ಕೆ ಪತಿ ಕೂಡ ಸಾಥ್ ನೀಡಿದ್ದಾನೆ.
23 ವರ್ಷದ ಪತಿ ಕಾರನ್ನ ಡ್ರೈವ್ ಮಾಡ್ತಿದ್ರೆ ಹಿಂಬದಿ ಸೀಟಿನಲ್ಲಿ ಬ್ರಿಯಾನ್ ಟರ್ನರ್ ಕುಳಿತಿದ್ದಳು. ಇನ್ನೇನು ಪೊಲೀಸರ ಕೈಗೆ ಸಿಕ್ಕಿ ಬಿಡ್ತೇವೆ ಎಂಬ ಭಯದಿಂದ ದಂಪತಿ ಗಾಂಜಾ ಗಿಡಗಳನ್ನ ನುಂಗಿದ್ದಾರೆ. ಆದರೆ ಕೊನೆಗೂ ಈ ದಂಪತಿಯನ್ನ ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರು ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ದಂಪತಿಯ ಕಳ್ಳಾಟ ಬಯಲಾಗಿದೆ.
ಅಂದಹಾಗೆ ಈ ಪ್ರಕರಣ ಬೆಳಕಿಗೆ ಬರಲು ಕಾರಣ ಇವರು ಓಡಿಸಿಕೊಂಡು ಹೋಗುತ್ತಿದ್ದ ಕಾರಿನ ನಿಜವಾದ ಮಾಲೀಕ ನೀಡಿದ ದೂರು. ತನ್ನ ಸ್ನೇಹಿತನಿಂದ ನಿಸಾನ್ ಸೆಡಾನ್ ಕಾರನ್ನ ಬಾಡಿಗೆಗೆ ಪಡೆದಿದ್ದ ಬೇಲಿ ಬಳಿಕ ಅದನ್ನ ವಾಪಾಸ್ ಮಾಡಲು ನಿರಾಕರಿಸಿದ್ದಳು ಎನ್ನಲಾಗಿದೆ. ಇದಕ್ಕಾಗಿ ಕಾರನ್ನ ಚೇಸ್ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಈ ದಂಪತಿಯ ಡ್ರಗ್ ಕಳ್ಳಾಟದ ಬಗ್ಗೆಯೂ ಸಾಕ್ಷ್ಯ ದೊರೆತಿದೆ.