alex Certify ಪತ್ನಿಯೊಂದಿಗೆ ಜಗಳ ಮಾಡಿ ಮೊಬೈಲ್ ಟವರ್ ಏರಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯೊಂದಿಗೆ ಜಗಳ ಮಾಡಿ ಮೊಬೈಲ್ ಟವರ್ ಏರಿದ ಭೂಪ

ಪತ್ನಿಯೊಂದಿಗೆ ಜಗಳ ಮಾಡಿಕೊಂಡ ಹಲವು ಗಂಡಂದಿರು ಚಿತ್ರವಿಚಿತ್ರವಾಗಿ ತಮ್ಮ ಅಸಹನೆ ವ್ಯಕ್ತಪಡಿಸುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇಲ್ಲೊಬ್ಬ ಭೂಪತಿ ಪತ್ನಿ ಜತೆ ಜಗಳವಾಡಿ ಬಳಿಕ‌ ಮೊಬೈಲ್ ಟವರ್ ಏರಿ ಕುಳಿತು, ಸ್ಥಳೀಯರಿಗೆ ಗಾಬರಿ ಹುಟ್ಟಿಸಿದ್ದಾನೆ.

ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ತೇಜ್‌ಪಾಲ್ ತನ್ನ ಹೆಂಡತಿಯೊಂದಿಗೆ ಜಗಳವಾಡಿದ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು.‌ ಪೊಲೀಸರು ತನ್ನ ಮಾತನ್ನು ಕೇಳಲಿಲ್ಲ ಎಂದು ಆತ ಸಿಟ್ಟು ಮಾಡಿಕೊಂಡು ಮೊಬೈಲ್ ಟವರ್ ಏರಿದ್ದಾನೆ. ಅದೃಷ್ಟವಶಾತ್ ಅಪಾಯವಾಗಿಲ್ಲ. ಸ್ಥಳೀಯ ಅಧಿಕಾರಿಗಳು ಮನವೊಲಿಸಿದ ನಂತರ ಆತ ಟವರ್ ಬಿಟ್ಟು ಕೆಳಗಿಳಿದಿದ್ದಾನೆ.

ಏಕೆ ಈ ಸಾಹಸ ಎಂದು ಅಧಿಕಾರಿಗಳು ಕೇಳಿದಾಗ, ನಡೆದ ಘಟನೆ ವಿವರಿಸಿದ್ದಾನೆ‌. ನಾನು ಹೆಂಡತಿಯ ಬಗ್ಗೆ ಬೇಸರಗೊಂಡಿದ್ದೆ, ಅವಳು ನನ್ನನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಪೊಲೀಸರು ನನ್ನ ಮಾತನ್ನು ಕೇಳುತ್ತಿಲ್ಲ ಎಂದು ಆ ವ್ಯಕ್ತಿ ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...