ದುಬೈ ಹಾಗೂ ಸಿಂಗಾಪುರದಿಂದ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ ಬರೋಬ್ಬರಿ 29.74 ಲಕ್ಷ ರೂಪಾಯಿ ಮೌಲ್ಯದ 588 ಗ್ರಾಂ ಚಿನ್ನವನ್ನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಆಗಮಿಸಿದ ಪ್ರಯಾಣಿಕರು ಗುದನಾಳದಲ್ಲಿ ಚಿನ್ನವನ್ನ ಪೇಸ್ಟ್ ರೂಪದಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಸಿಂಗಾಪುರದಿಂದ ಬಂದಳಿದ ಪ್ರಯಾಣಿಕ 158 ಗ್ರಾಂ ಚಿನ್ನವನ್ನ ಕಾರ್ಡ್ಲೆಸ್ ಯಂತ್ರದಲ್ಲಿ ಅಡಗಿಸಿ ಇಟ್ಟಿದ್ದ ಎನ್ನಲಾಗಿದೆ.
ಆರೋಪಿಗಳಿಂದ ಚಿನ್ನವನ್ನ ವಶಪಡಿಸಿಕೊಂಡಿರುವ ಕಸ್ಟಮ್ಸ್ ಅಧಿಕಾರಿಗಳು ಕಸ್ಟಮ್ಸ್ ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣವನ್ನ ದಾಖಲಿಸಿದ್ದಾರೆ.
ದುಬೈ ಹಾಗೂ ಶಾರ್ಜಾದಿಂದ ಆಗಮಿಸಿದ್ದ 7 ಪ್ರಯಾಣಿಕರಿಂದ 2.17 ಕೋಟಿ ರೂ . ಮೌಲ್ಯದ ಚಿನ್ನವನ್ನ ಇತ್ತೀಚೆಗೆ ವಶಪಡಿಸಿಕೊಳ್ಳಲಾಗಿತ್ತು. ರಬ್ಬರ್ ಹೊದಿಕೆ ಮಾಡಲಾದ ಚಿನ್ನದ ಮಾತ್ರೆಗಳನ್ನ ಆರೋಪಿಗಳು ನುಂಗಿದ್ದರು.
ಜನವರಿ 22 ರಂದು ಬಂದಿಳಿದ ಪ್ರಯಾಣಿಕರು, ಅಧಿಕಾರಿಗಳು ಪ್ರಶ್ನಿಸುವಾಗ ಹೊಟ್ಟೆ ಮತ್ತು ಗುದನಾಳದಲ್ಲಿ ಚಿನ್ನದ ಪೇಸ್ಟ್ ಕ್ಯಾಪ್ಸುಲ್ಗಳನ್ನು ಮರೆಮಾಚಿದ್ದಾಗಿ ಒಪ್ಪಿಕೊಂಡರು. ಸರ್ಕಾರಿ ಆಸ್ಪತ್ರೆಯಲ್ಲಿ ಎಂಟು ದಿನಗಳ ಪ್ರಕ್ರಿಯೆಯ ನಂತರ, ಅಧಿಕಾರಿಗಳು ಕ್ಯಾಪ್ಸುಲ್ಗಳನ್ನು ವಶಪಡಿಸಿಕೊಂಡರು.