ಪ್ರಾಣಿ, ಪಕ್ಷಿಗಳಿಗೆ ಪ್ರೀತಿ ತೋರಿಸುವ ಸಾಕಷ್ಟು ಜನ ಜಗತ್ತಿನಲ್ಲಿದ್ದಾರೆ. ಅವುಗಳಿಗೆ ಆಹಾರ, ಚಿಕಿತ್ಸೆ ನೀಡುವ ಎಷ್ಟೋ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣುತ್ತಿರುತ್ತವೆ. ಇಲ್ಲಿ ವ್ಯಕ್ತಿಯೊಬ್ಬ ಹಕ್ಕಿಗಳನ್ನು ಮಾರಾಟಗಾರನಿಂದ ಖರೀದಿಸಿ ಹಾರಿಬಿಡುವ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
ವೈಲ್ಡ್ ಲೈಫ್ ಕ್ಲಪ್ ಎಂಬ ಇನ್ಸ್ಟಾಗ್ರಾಂ ಪೇಜ್ ಹಾಗೂ ಹಿರಿಯ ಸರ್ಕಾರಿ ಅಧಿಕಾರಿ ದಯಾನಂದ ಕಾಂಬಳೆ ಅವರ ಟ್ವಿಟರ್ ನಲ್ಲಿ ವಿಡಿಯೋ ಅಪ್ಲೋಡ್ ಆಗಿದೆ. ಐಷಾರಾಮಿ ಕಾರಿನಲ್ಲಿ ಕನ್ನಡಕ ಹಾಕಿ ಕುಳಿತ ವ್ಯಕ್ತಿ, ಸಣ್ಣ ಬೋನ್ ನಲ್ಲಿರುವ ಗುಬ್ಬಿಗಳನ್ನು ಮಾರಾಟ ಮಾಡುವ ಬಾಲಕನಿಂದ ಖರೀದಿಸಿ ಬಂಧಮುಕ್ತ ಮಾಡುತ್ತಿರುವ ದೃಶ್ಯ ವಿಡಿಯೋ ಕ್ಲಿಪ್ ನಲ್ಲಿದೆ.
ಸಾಕಷ್ಟು ಜನ ಇದಕ್ಕೆ ಕಮೆಂಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಕ್ಕಿಗಳನ್ನು ಬಂಧಮುಕ್ತ ಮಾಡಿದಾತನನ್ನು ಟ್ವಿಟರ್ ಬಳಕೆದಾರನೊಬ್ಬ ನಿಜವಾದ ಹಿರೋ ಎಂದು ಕರೆದಿದ್ದಾನೆ. ಆದರೆ, ಇನ್ನೊಬ್ಬ ಪ್ರತಿಕ್ರಿಯೆ ಮಾಡಿ, ಇವುಗಳು ತರಬೇತಿ ಪಡೆದ ಹಕ್ಕಿಗಳಾಗಿದ್ದು, ಮಾರಾಟಗಾರನ ಬಳಿ ಮತ್ತೆ ಬರುತ್ತದೆ ಎಂದು ಸಂಶಯ ವ್ಯಕ್ತಪಡಿಸಿದ್ದಾನೆ.
https://www.instagram.com/p/CB1SG9Dp3xZ/?utm_source=ig_embed
https://twitter.com/ahsansalman345/status/1290214501422264320?ref_src=twsrc%5Etfw%7Ctwcamp%5Etweetembed%7Ctwterm%5E1290214501422264320%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fman-buys-birds-just-to-set-them-free-netizens-laud-him-for-his-kind-deed-2759487.html