ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಿತ್ರ ಘಟನೆಗಳು ವರದಿಯಾಗ್ತಾನೇ ಇರುತ್ತವೆ. ಪ್ರಾಣಿಗಳ ಇಲ್ಲವೇ ಮನುಷ್ಯರ ವಿಚಿತ್ರ ಸನ್ನಿವೇಶಗಳು ನೆಟ್ಟಿಗರನ್ನ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ.
ಇದೀಗ ಇಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ವ್ಯಕ್ತಿಯೊಬ್ಬ ಮೊಸಳೆಯ ಹತ್ತಿರಕ್ಕೆ ಹೋಗಿದ್ದು ಮಾತ್ರವಲ್ಲದೇ ಅದರ ಬೆನ್ನು ಸವರುವ ಮೂಲಕ ನೆಟ್ಟಿಗರು ಹುಬ್ಬೇರುವಂತೆ ಮಾಡಿದ್ದಾನೆ. ಗುಜರಾತಿನ ವಡೋದರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಐವರು ಕನ್ನಡಿಗರು ಸೇರಿ 119 ಮಂದಿಗೆ ಪದ್ಮ ಪ್ರಶಸ್ತಿ
ಇಷ್ಟಕ್ಕೆ ಸುಮ್ಮನಾಗದ ಆತ ಮೊಸಳೆಯ ಬಳಿ ಮಾತನಾಡಿದ್ದಾನೆ. ಮೊಸಳೆಯ ಜೊತೆ ಗೆಳೆತನ ಮಾಡೋಕೆ ಹೋದ ಈತನ ಧೈರ್ಯ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಇದಕ್ಕಿಂತ ವಿಚಿತ್ರ ವಿಚಾರ ಅಂದ್ರೆ ಮನುಷ್ಯ ಅಷ್ಟು ಸಮೀಪ ಹೋದ್ರೂ ಮೊಸಳೆ ಏನೂ ಮಾಡದೇ ಸುಮ್ಮನೇ ಕುಳಿತಿದೆ.