ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದ ಸಹ ಆಳುವ ವರ್ಗ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪ ಮಾಡಿದ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ರಾಜ್ಯಪಾಲರ ಅಧಿಕೃತ ನಿವಾಸದ ಮುಂದೆ ವಿಶಿಷ್ಟವಾದ ಪ್ರತಿಭಟನೆಗೆ ಮುಂದಾಗಿದ್ದಾರೆ.
ರಾಜ ಭವನದ ಗೇಟ್ ಮುಂದೆ ಕುರಿ ಮಂದೆಯನ್ನು ತಂದು ನಿಲ್ಲಿಸಿಕೊಂಡು ಪ್ರತಿಭಟನೆಗೆ ಮುಂದಾದ ವೇಳೆ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಲು ಮುಂದಾಗಿದ್ದು ಅವರನ್ನು ಓಡಿಸಿದ್ದಾರೆ. ರಾಜ್ಯಪಾಲ ಜಗದೀಪ್ ಧನಕರ್ ಅವರ ಹುಟ್ಟುಹಬ್ಬದ ದಿನವೇ ಈ ಘಟನೆ ಜರುಗಿದೆ.
ನಿಮಗೆ ಗೊತ್ತಾ….? ಚಪ್ಪಲಿ ಧರಿಸಿ ಬೈಕ್ ಚಲಾಯಿಸಿದ್ರೂ ಕಟ್ಟಬೇಕು ದಂಡ
ಕುರಿಗಾಹಿಗಳೊಂದಿಗೆ ಬಂದಿದ್ದ ಕೋಲ್ಕತ್ತಾ ನಾಗರಿಕ್ ಮಂಚಾದ ವಕ್ತಾರ ಮಾತನಾಡಿ, ಸಾಂಕ್ರಮಿಕದ ಕಾರಣದಿಂದ ಜನರು ಒಂದೆಡೆ ಸೇರುವುದನ್ನು ನಿಷೇಧಿಸಿರುವ ಕಾರಣ ಹೀಗೆ ಮಾಡಿದ್ದಾಗಿ ತಿಳಿಸಿದ್ದಾರೆ. ಕುರ್ತಾ ಹಾಗೂ ಜೀನ್ಸ್‌ಧಾರಿ ವ್ಯಕ್ತಿಯೊಬ್ಬರು ಆರು ಬಿಳಿ ಹಾಗೂ ಎರಡು ಕರಿ ಕುರಿಗಳನ್ನು ತಮ್ಮೊಂದಿಗೆ ರಾಜಭವನದ ದ್ವಾರದ ಬಳಿ ಬಂದಿದ್ದರು.
“ರಾಜ್ಯದಲ್ಲಿ ಆಮ್ಲಜನಕದ ಕೊರತೆ ಇದ್ದು ಕೋವಿಡ್-19 ರೋಗಿಗಳಿಗೆ ಹಾಸಿಗೆ ಸಿಗುತ್ತಿಲ್ಲ, ಜನರು ಸಾಯುತ್ತಿದ್ದಾರೆ. ಆದರೆ ಈ ವಿಚಾರವಾಗಿ ರಾಜ್ಯಪಾಲರು ಕೊರೋನಾ ವೈರಸ್ ಸಮಸ್ಯೆಗೆ ಸಿಲುಕಿರುವ ಮಂದಿಯ ಬೆಂಬಲಕ್ಕೆ ಧಾವಿಸುತ್ತಿಲ್ಲ” ಎಂದು ವಕ್ತಾರರು ತಿಳಿಸಿದ್ದಾರೆ.
https://twitter.com/jdhankhar1/status/1394861341702197251?ref_src=twsrc%5Etfw%7Ctwcamp%5Etweetembed%7Ctwterm%5E1394861341702197251%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fman-assembles-with-sheep-outside-bengal-governors-residence-to-protest-covid-19-crisis-3753896.html