alex Certify ಆಸ್ಪತ್ರೆ ವಾರ್ಡ್​ನಲ್ಲಿ ಹೈಡ್ರಾಮಾ: ಬೆಡ್​ ವಿಚಾರಕ್ಕೆ ಶುರುವಾದ ಫೈಟ್​ ಕೊಲೆಯಲ್ಲಿ ಅಂತ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆ ವಾರ್ಡ್​ನಲ್ಲಿ ಹೈಡ್ರಾಮಾ: ಬೆಡ್​ ವಿಚಾರಕ್ಕೆ ಶುರುವಾದ ಫೈಟ್​ ಕೊಲೆಯಲ್ಲಿ ಅಂತ್ಯ..!

ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬ ಇನ್ನೊಬ್ಬ ರೋಗಿಯನ್ನ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಬ್ಬರು ರೋಗಿಗಳ ನಡುವೆ ಬೆಡ್​ ವಿಚಾರಕ್ಕೆ ವಾದ ಶುರುವಾಗಿದ್ದು ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮೃತ ರೋಗಿಯ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹಂಸ್​ರಾಮ್​​ ಮೃತ ರೋಗಿಯಾಗಿದ್ದರೆ ಆರೋಪಿಯನ್ನ ಅಬ್ದುಲ್​ ರೆಹಮಾನ್​​ ಎಂದು ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥನಾಗಿದ್ದ ರೆಹಮಾನ್​ ಆಸ್ಪತ್ರೆಯಲ್ಲಿ ಚಿಕತ್ಸೆಯನ್ನ ಪಡೆಯುತ್ತಿದ್ದ.

ಹಂಸರಾಮ್​​ ಜ್ವರ ಹಾಗೂ ನಿತ್ರಾಣದಿಂದ ಬಳಲುತ್ತಿದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ. ರೆಹಮಾನ್​ ಕೂಡ ಡಿಹೈಡ್ರೇಷನ್​ ಸಮಸ್ಯೆಯಿಂದ ಬಳಲಿದ್ದರಿಂದ ಹಂಸರಾಮ್​ ಇದ್ದ ವಾರ್ಡ್​ಗೆ ಅಡ್ಮಿಟ್​ ಮಾಡಲಾಗಿತ್ತು.

ಭಾನುವಾರ ಬೆಳಗ್ಗೆ, ಶೌಚಾಲಯದಿಂದ ಬಂದ ರೆಹಮಾನ್​ ಹಂಸರಾಮ್​​ನ ಹಾಸಿಗೆ ತನ್ನದು ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದ. ಹೀಗಾಗಿ ಹಂಸರಾಮ್​ ಬಳಿ ತನ್ನ ಹಾಸಿಗೆ ಬಿಡುವಂತೆ ಕೇಳಿ ರಂಪಾಟ ಮಾಡಿದ್ದಾನೆ. ಕೋಪದಿಂದ ಹಂಸರಾಮ್​ನನ್ನು ಹಾಸಿಗೆಯಿಂದ ಎತ್ತಿದ ರೆಹಮಾನ್ ಆತನನ್ನ ನೆಲಕ್ಕೆ ಉರುಳಿಸಿದ್ದ. ಇದಾದ ಬಳಿಕ ಹಂಸರಾಮ್​ ​​ಎದೆಯ ಮೇಲೆ ಕೂತು ಆತನ ಕೊಲೆ ಮಾಡಿದ್ದಾನೆ.

ಈ ಘಟನೆ ಬಳಿಕ ಶಹಜಾನ್​ಪುರ ಮ್ಯಾಜಿಸ್ಟ್ರೇಟ್​ ಇಂದ್ರಾ ವಿಕ್ರಮ್​ ಸಿಂಗ್​ ಹಾಗೂ ಹಿರಿಯ ಪೊಲೀಸ್​ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ರೆಹಮಾನ್​ ತಂದೆ ತನ್ನ ಪುತ್ರ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಹೇಳಿದ್ದಾರೆ. ಆದರೆ ಪುತ್ರ ಮಾನಸಿಕ ಅಸ್ವಸ್ಥ ಎಂದು ಸಾಬೀತುಪಡಿಸುವ ಯಾವುದೇ ದಾಖಲೆ ರೆಹಮಾನ್​ ತಂದೆ ಬಳಿ ಇಲ್ಲ.

ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಮೃತ ಹಂಸರಾಮ್​​​ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಪೊಲೀಸ್​ ವರಿಷ್ಠಾಧಿಕಾರಿ ಸಂಜಯ್​ ಕುಮಾರ್​, ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರ ಪ್ರಶ್ನೆಗೆ ಆತನ ಬಳಿ ಸೂಕ್ತ ಉತ್ತರಗಳಿಲ್ಲ. ಮೃತನ ಕುಟುಂಬಸ್ಥರು ಪೊಲೀಸರ ಕ್ರಮದಿಂದ ತೃಪ್ತರಾಗಿದ್ದಾರೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...