alex Certify ʼಲಾಕ್‌ ಡೌನ್‌ʼ ವೇಳೆ ಮದುವೆ ಬ್ಯಾನ್​ ಮಾಡಲು ಮೊರೆಯಿಟ್ಟ ಯುವಕ…! ಇದರ ಹಿಂದಿದೆ ವಿಚಿತ್ರ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್‌ ಡೌನ್‌ʼ ವೇಳೆ ಮದುವೆ ಬ್ಯಾನ್​ ಮಾಡಲು ಮೊರೆಯಿಟ್ಟ ಯುವಕ…! ಇದರ ಹಿಂದಿದೆ ವಿಚಿತ್ರ ಕಾರಣ

ಕಳೆದ ವಾರವಷ್ಟೇ ಬಿಹಾರ ಸಿಎಂ ನಿತೀಶ್​ ಕುಮಾರ್​ ರಾಜ್ಯದಲ್ಲಿ ಲಾಕ್​ಡೌನ್​ ಅವಧಿಯನ್ನ ಮೇ 25ರವರೆಗೆ ವಿಸ್ತರಣೆ ಮಾಡೋದಾಗಿ ಹೇಳಿದ್ದರು.

ಈ ವೇಳೆಯಲ್ಲಿ ಬಿಹಾರ ಸಿಎಂಗೆ ಯುವಕನೊಬ್ಬ ವಿಚಿತ್ರ ಕಾರಣಕ್ಕೆ ಲಾಕ್​ಡೌನ್​ ಅವಧಿಯಲ್ಲಿ ಮದುವೆ ಕಾರ್ಯಕ್ರಮಗಳನ್ನ ಬ್ಯಾನ್​ ಮಾಡಿ ಎಂದು ಮನವಿ ಮಾಡಿದ್ದಾರೆ.

ಬಿಹಾರ ಸಿಎಂ ನಿತೀಶ್​ ಕುಮಾರ್​ ಮಾಡಿದ್ದ ಲಾಕ್​ಡೌನ್​ ವಿಸ್ತರಣೆ ಟ್ವೀಟ್​ಗೆ ಪ್ರತಿಕ್ರಿಯಿಸಿದ ಪಂಕಜ್​​ ಕುಮಾರ್​ ಗುಪ್ತಾ, ಸರ್​ ದಯಮಾಡಿ ನೀವು ಮದುವೆಗಳನ್ನ ಬ್ಯಾನ್​ ಮಾಡಿ. ಈ ರೀತಿ ಮಾಡಿದ್ರೆ ಮೇ 19ರಂದು ನಿಗದಿಯಾಗಿದ್ದ ನನ್ನ ಗರ್ಲ್​ಫ್ರೆಂಡ್​ ಮದುವೆ ಕೂಡ ಪೋಸ್ಟ್ ಪೋನ್​ ಆಗುತ್ತೆ. ಈ ರೀತಿ ಮಾಡಿದ್ರೆ ನಾನು ನಿಮಗೆ ಜೀವನ ಪೂರ್ತಿ ಕೃತಜ್ಞನಾಗಿರುತ್ತೇನೆ ಎಂದು ಬರೆದಿದ್ದಾನೆ.

ಪಂಕಜ್​ರ ಈ ವಿಚಿತ್ರ ಮನವಿ ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇದಕ್ಕೆ ನವ್ಯಾ ಕುಮಾರಿ ಎಂಬವರು ಪ್ರತಿಕ್ರಿಯಿಸಿದ್ದು ಈ ಟ್ವೀಟ್​ ಇನ್ನಷ್ಟು ಮಜವಾಗಿದೆ.

ನೀನು ನನ್ನ ಬಿಟ್ಟು ಪೂಜಾಳ ಹಿಂದೆ ಹೋದೆ. ಆ ಸಮಯದಲ್ಲಿ ನಾನು ತುಂಬಾನೇ ಅಳುತ್ತಿದ್ದೆ ಪಂಕಜ್​. ನಾನೀಗ ಖುಷಿಯಲ್ಲಿ ಮದುವೆಯಾಗುತ್ತಿದ್ದೇನೆ. ಹೀಗಾಗಿ ನೀನು ಕೂಡ ಈ ರೀತಿ ಮನವಿ ಮಾಡಬೇಕು. ಆದರೆ ಪಂಕಜ್​, ನೀನು ಬೇರೆಯವರನ್ನ ಮದುವೆಯಾದರೂ ಸಹ ನನ್ನ ಹೃದಯದಲ್ಲಿ ಯಾವಾಗಲೂ ಇರುತ್ತೀಯಾ. ದಯಮಾಡಿ ನನ್ನ ಮದುವೆಗೆ ಬಾ ಎಂದು ರಿಪ್ಲೈ ಮಾಡಿದ್ದಾಳೆ.

ಈ ವೇಳೆ ಅನೇಕರು ಪಂಕಜ್​ ಜೊತೆ ಇರಿ ಎಂದು ನವ್ಯಾ ಬಳಿ ಮನವಿ ಮಾಡಿದ್ರೆ ಇನ್ನೂ ಕೆಲವರು ನೀವು ಈ ರೀತಿ ವೈಯಕ್ತಿಕ ಜೀವನವನ್ನ ಸಾರ್ವಜನಿಕವಾಗಿ ಹೇಳಿಕೊಂಡರೆ ನಿಮ್ಮ ಮದುವೆ ಮೇಲೆ ಪ್ರಬಾವ ಬೀರಬಹುದು ಎಂದು ಹೇಳಿದ್ದಾರೆ.

ಆದರೆ ಕತೆ ಇಲ್ಲಿಗೆ ಮುಗಿಯಲಿಲ್ಲ. ಪಂಕಜ್,​ ನವ್ಯಾಗೆ ನೀವು ಯಾರೆಂದು ತಿಳಿಯಲಿಲ್ಲ ಸಹೋದರಿ ಎಂದು ಪ್ರತಿಕ್ರಿಯಿಸಿದ್ದಾರೆ.

ಗುಲಾಬಿಯ ಹುಡುಕಾಟದಲ್ಲಿ ನೀವು ಗುಲಾಬ್​ ಜಾಮೂನ್​ನ್ನು ಕಳೆದುಕೊಂಡೆ ಪಂಕಜ್​​ ಎಂದು ನವ್ಯಾ ಉತ್ತರ ನೀಡಿದ್ದಾರೆ. ಈ ಪಂಕಜ್​ – ನವ್ಯಾ ಸಂಭಾಷಣೆ ಟ್ವಿಟರ್​ನಲ್ಲಿ ಸಖತ್​ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...