
ತೆಲುಗು ಚಿತ್ರ ನಟಿಯನ್ನು ಹಿಂಬಾಲಿಸಿ ಕಿರಿಕಿರಿ ಉಂಟು ಮಾಡಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಜಮಶೆಡ್ ಪುರದ 26 ವರ್ಷದ ಎಂಎಸ್ಸಿ ಪದವೀಧರ ನಿತಿನ್ ಗಂಗ್ವಾರ್ ಬಂಧಿತನಾದ ಯುವಕ. ಪ್ರಕರಣ ದಾಖಲಿಸಿಕೊಂಡ ರೋಹಿಣಿ ಪ್ರದೇಶದ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಆರೋಪಿಯು ಎರಡು ವರ್ಷಗಳಿಂದ ನಟಿಯನ್ನು ಹಿಂಬಾಲಿಸುತ್ತಿದ್ದ, ನಟಿ ಆತನನ್ನು ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮಾಡಿದ್ದರು. ಆದರೆ ನಕಲಿ ಖಾತೆ ತೆರೆದು ಅದರ ಮೂಲಕ ಬಂದೂಕಿನ ಚಿತ್ರದೊಂದಿಗೆ ಬೆದರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.