ಹರ್ಯಾಣದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ವಂತ ಮಕ್ಕಳನ್ನು ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ, ತನ್ನದೇ ಐವರು ಮಕ್ಕಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದಾನೆ.
ತಾಂತ್ರಿಕನ ಸೂಚನೆ ಮೇರೆಗೆ ವ್ಯಕ್ತಿ ತನ್ನ ಮಕ್ಕಳ ಹತ್ಯೆ ಮಾಡಿದ್ದಾನೆ. ಜುಲೈ 15 ರಂದು ದಿಂದ್ವಾರ ಗ್ರಾಮದಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರ ಶವ ಕಾಲುವೆಯಲ್ಲಿ ಸಿಕ್ಕಿತ್ತು. ತಂದೆ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆಂದು ದೂರು ನೀಡಿದ್ದ. ಪತ್ನಿ ಈಗ ಆರನೇ ಮಗುವಿನ ಗರ್ಭಿಣಿಯಾಗಿದ್ದಾಳೆ.
ಒಬ್ಬೊಬ್ಬರನ್ನಾಗಿ ಮೂರು ಮಕ್ಕಳನ್ನು ಆತ ಹತ್ಯೆ ಮಾಡಿದ್ದ. ಕೆಲವೇ ದಿನಗಳ ಅಂತರದಲ್ಲಿ ಒಂದೊಂದು ಕಾರಣಕ್ಕೆ ಮಕ್ಕಳು ಸತ್ತಿದ್ದರು. ಆದ್ರೆ ಮರಣೋತ್ತರ ಪರೀಕ್ಷೆ ನಡೆದಿರಲಿಲ್ಲ. ಬಾಲಕಿಯರಿಬ್ಬರ ಶವ ಒಟ್ಟಿಗೆ ಸಿಕ್ಕ ನಂತ್ರ ಪ್ರಕರಣ ಹೊರಗೆ ಬಂದಿದೆ.