
ದೀದಿ ನಾಡಲ್ಲಿ ಸವಾಲೆಸೆದಿದ್ದ ಬಿಜೆಪಿಯನ್ನ ಬಗ್ಗು ಬಡಿದ ಬ್ಯಾನರ್ಜಿಗೆ ಈಗಾಗಲೇ ವಿವಿಧ ನಾಯಕರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಕೊರೊನಾದಂತಹ ಕಠಿಣ ಸಂದರ್ಭದಲ್ಲೂ ಜನರ ಮನಸ್ಸನ್ನ ಗೆಲ್ಲುವಲ್ಲಿ ಮಮತಾ ಯಶಸ್ವಿಯಾಗಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ವಿಜಯದ ಭಾಷಣ ಮಾಡಿದ ಮಮತಾ ಬ್ಯಾನರ್ಜಿ, ಇದು ಕೇವಲ ಪಶ್ಚಿಮ ಬಂಗಾಳದ ಗೆಲುವಲ್ಲ. ಬದಲಾಗಿ ಸಂಪೂರ್ಣ ಭಾರತದ ಗೆಲುವು ಎಂದು ಹೇಳಿದ್ದರು.
ಇಂಡಿಯಾ ಹಿಸ್ಟರಿ ಪಿಕ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ಮಮತಾ ಬ್ಯಾನರ್ಜಿಯ 1980ರ ದಶಕದ ಫೋಟೋವನ್ನ ಶೇರ್ ಮಾಡಲಾಗಿದೆ. ಈ ಫೋಟೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋಗೆ ಸಾಕಷ್ಟು ಮಂದಿ ಕಮೆಂಟ್ಗಳನ್ನ ಹಾಕಿದ್ದು ಮಮತಾ ಗಟ್ಟಿಗಿತ್ತಿ ಎಂದು ಹಾಡಿ ಹೊಗಳಿದ್ದಾರೆ.
https://twitter.com/pulkit77777/status/1388766441122406402