ನೇತಾಜಿ ಸುಭಾಷ್ ಚಂದ್ರ ಬೋಸ್ರ ಜನ್ಮದಿನವನ್ನ ಸರ್ಕಾರಿ ರಜೆಯನ್ನಾಗಿ ಘೋಷಿಸುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸುಭಾಷ್ ಚಂದ್ರ ಬೋಸ್ ಪಶ್ಚಿಮ ಬಂಗಾಳದ ಹೆಮ್ಮೆಯ ಪುತ್ರ. 2022ರ ಜನವರಿ 23ರಂದು ಸುಭಾಷ್ ಚಂದ್ರ ಬೋಸ್ರ 125ನೇ ಜನ್ಮದಿನ ನಡೆಯಲಿದೆ.
ದೇಶಾದ್ಯಂತ ನೇತಾಜಿ ಜನ್ಮದಿನವನ್ನ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗ್ತಿದೆ. ದೇಶಕ್ಕಾಗಿ ಹೋರಾಡಿದ ಈ ಧೀಮಂತ ನಾಯಕನ ಜನ್ಮದಿನವನ್ನ ಗೌರವಿಸುವುದಕ್ಕೋಸ್ಕರ ಕೇಂದ್ರ ಸರ್ಕಾರ ಇದನ್ನ ಸರ್ಕಾರಿ ರಜೆಯ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ಬರೆದಿದ್ದಾರೆ.