ಕೇರಳದ ಲುಲು ಮಾಲ್ನಲ್ಲಿ ಇಬ್ಬರು ಪುರುಷರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಅಂತಾ ಮಲಯಾಳಂ ನಟಿಯೊಬ್ಬರು ಆರೋಪಿಸಿದ್ದಾರೆ. ತಾನು ಹಾಗೂ ತನ್ನ ಸಹೋದರಿ ಮಾಲ್ನಲ್ಲಿ ತೆರಳುತ್ತಿದ್ದ ವೇಳೆ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಆರೋಪ ಮಾಡಿದ್ದಾರೆ.
ಮಾಲ್ನಲ್ಲಿ ನಮ್ಮ ಹಿಂದೆಯೇ ಬಂದ ಇಬ್ಬರು ಪುರುಷರು ನಮ್ಮನ್ನ ಹಿಂಬಾಲಿಸಿದ್ದಾರೆ ಹಾಗೂ ನಮ್ಮೊಟ್ಟಿಗೆ ಮಾತನಾಡಲು ಯತ್ನಿಸಿದ್ದಾರೆ ಎಂದು ಮಲಯಾಳಂ ನಟಿ ಹೇಳಿಕೊಂಡಿದ್ದಾರೆ.
ಘಟನೆ ಸಂಬಂಧ ರಾಜ್ಯ ಮಹಿಳಾ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ. ನಟಿಯ ಸೋಶಿಯಲ್ ಮೀಡಿಯಾ ಫೋಟೋವನ್ನ ಆಧರಿಸಿ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗಿದೆ.