ತಿರುವನಂತಪುರಂ: ಸ್ನಾನಕ್ಕೆಂದು ಹೋಗಿ ಮಾಲಂಕಾರ ಡ್ಯಾಂ ನಲ್ಲಿ ನೀರಿಗಿಳಿದಿದ್ದ ಮಲಯಾಳಂ ಖ್ಯಾತ ನಟ ಅನಿಲ್ ನೆಡುಮಂಗಾಡ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಅನಿಲ್ ನೆಡುಮಂಗಾಡ್ ಗೆ 48 ವರ್ಷ ವಯಸ್ಸಾಗಿತ್ತು. ಶೂಟಿಂಗ್ ಮಧ್ಯೆ ಬಿಡುವಿದ್ದ ವೇಳೆ ಅನಿಲ್ ತಮ್ಮ ಸ್ನೇಹಿತರ ಜೊತೆಗೂಡಿ ಡ್ಯಾಂಗೆ ಸ್ನಾನಕ್ಕೆಂದು ಇಳಿದಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ನೋಡನೋಡುತ್ತಿದ್ದಂತೆಯೇ ನೀರಿನಲ್ಲಿ ಮುಳುಗಿದ್ದಾರೆ. ತಕ್ಷಣ ಅವರನ್ನು ರಕ್ಷಿಸಿ ತೋಡುಪುಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಅನಿಲ್ ಮೃತಪಟ್ಟಿದ್ದರು.
ನಿರೂಪಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅನಿಲ್, ಕಮ್ಮಟ್ಟಿ ಪಾಡಮ್, ಎನ್ಜನ್ ಸ್ಟೀವ್, ಪೊರಿಂಜು ಮರಿಯಮ್ ಜೋಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು.