
2021ರ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಗೂ ಮುನ್ನ ಭಾರತೀಯ ಜನತಾ ಪಾರ್ಟಿಗೆ ದೊಡ್ಡ ಹೊಡೆತ ನೀಡುವ ಘಟನೆಯೊಂದರಲ್ಲಿ, ಎನ್‌ಡಿಎ ಮೈತ್ರಿಯಿಂದ ಇಲ್ಲಿನ ಗೋರ್ಖಾ ಜನ್‌ಮುಕ್ತಿ ಮೋರ್ಚಾ ಹೊರನಡೆದಿದೆ.
ಈ ಬಗ್ಗೆ ಮಾತನಾಡಿದ ಪಕ್ಷದ ಅಧ್ಯಕ್ಷ ಬಿಮಲ್ ಗುರುಂಗ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ.
ಪ್ರತ್ಯೇಕ ಗೋರ್ಖಾಲ್ಯಾಂಡ್ ಸ್ಥಾಪನೆಗೆ ಯಾರು ಬೆಂಬಲ ಕೊಡುತ್ತಾರೋ ಅವರಿಗೆ ತಮ್ಮ ಬೆಂಬಲವಿರುವುದಾಗಿ ತಿಳಿಸಿದ ಗುರುಂಗ್, ಮೂರು ಬಾರಿ ಬಿಜೆಪಿಗೆ ಬೆಂಬಲ ಕೊಟ್ಟು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ ಬಳಿಕವೂ ಸಹ ಗೋರ್ಖಾಲ್ಯಾಂಡ್‌ಗೆ ಬುಡಕಟ್ಟು ಸ್ಥಾನಮಾನ ಕೊಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬ ಆರೋಪವನ್ನು ಬಿಜೆಪಿ ವಿರುದ್ಧ ಮಾಡಿದ್ದಾರೆ.