alex Certify ನಾನು ಸತ್ತರೂ ಸರಿ ನಾಯಿಯನ್ನು ಸಾಯಲು ಬಿಡಲಾರೆ ಎಂದ ಬಡ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಸತ್ತರೂ ಸರಿ ನಾಯಿಯನ್ನು ಸಾಯಲು ಬಿಡಲಾರೆ ಎಂದ ಬಡ ವ್ಯಕ್ತಿ

ಕೋವಿಡ್​ 19 ಡೆಡ್ಲಿ ವೈರಸ್​ನಿಂದಾಗಿ ಮನುಷ್ಯನ ಜೀವನ ಕ್ರಮವೇ ಬದಲಾಗಿ ಹೋಗಿದೆ. ಕಳೆದ ವರ್ಷದಿಂದ ಶುರುವಾದ ಈ ಕೊರೊನಾ ವೈರಸ್​ ಇಲ್ಲಿಯವರೆಗೂ ಜನರ ಜೀವಕ್ಕೆ ಸಂಚಕಾರವಾಗಿಯೇ ನಿಂತಿದೆ.

ಈಗಂತೂ ಕೊರೊನಾ ಎರಡನೇ ಅಲೆ ಮುಂದುವರಿದಿದ್ದು ದಿನದಿಂದ ದಿನಕ್ಕೆ ಕೊರೊನಾ ಕೇಸ್​ಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ.

ಕೊರೊನಾದಿಂದ ಜೀವಕ್ಕೆ ಅಪಾಯ ಅನ್ನೋದು ಒಂದೆಡೆಯಾದ್ರೆ ಕುಟುಂಬದಿಂದ ದೂರವಿರಬೇಕಾದ ಅನಿವಾರ್ಯತೆ ಅನೇಕರ ಮಾನಸಿಕ ಸ್ವಾಸ್ಥ್ಯವನ್ನ ಕೆಡಿಸಿದೆ. ಸಾಮಾಜಿಕ ಅಂತರ ಮಾಸ್ಕ್​ ಬಳಕೆಯಂತೂ ಜೀವನ ಕ್ರಮದಲ್ಲಿ ಸೇರಿಹೋಗಿದೆ.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಪೋಸ್ಟ್ ಒಂದರಲ್ಲಿ ಬಡವನೊಬ್ಬ ತಾನು ಖರೀದಿಸಿದ ಒಂದೇ ಒಂದು ಮಾಸ್ಕ್​​ನ್ನ ತನ್ನ ಶ್ವಾನದ ಮುಖಕ್ಕೆ ಅಳವಡಿಸಿದ್ದು ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಹೃದಯ ಮಿಡಿಯುವಂತೆ ಮಾಡಿದೆ.

ನೀನು ಮಾಸ್ಕ್ ಧರಿಸದೇ ಶ್ವಾನಕ್ಕೇಕೆ ಹಾಕಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋಹನ್​ ಲಾಲ್​, ನಾನು ಬೇಕಿದ್ದರೆ ಸಾಯಲು ರೆಡಿ ಇದ್ದೇನೆ. ಆದರೆ ಈ ಶ್ವಾನವನ್ನ ಸಾಯಲು ಬಿಡಲಾರೆ. ಇದು ನನ್ನ ಮಗು. ಬಾಲ್ಯದಿಂದಲೂ ನಾನೇ ಸಾಕಿದ್ದೇನೆ ಎಂದು ಹೇಳಿದ್ದಾರೆ. ಮೋಹನ್​ ಲಾಲ್​ ತನ್ನ ಶ್ವಾನಕ್ಕೆ ಪುರು ಎಂದು ಹೆಸರಿಟ್ಟಿದ್ದಾರೆ.

ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದ್ದು ಮಿಲಿಯನ್​ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ಈತನ ಶ್ವಾನ ಪ್ರೇಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

https://youtu.be/p-TO51Orizo

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...