ಕೊರೋನಾ ವೈರಸ್ ಕಾರಣದಿಂದಾಗಿ ದೇಶಾದ್ಯಂತ ಸಾಕಷ್ಟು ಜನರಿಗೆ ಅನಾನುಕೂಲವಾಗಿದೆ. ಅತ್ಯಗತ್ಯ ವಸ್ತುಗಳು ಹಾಗೂ ಸೇವೆಗಳ ಲಭ್ಯತೆ ಕುಂಠಿತಗೊಂಡ ಕಾರಣ ಸಾಕಷ್ಟು ಪರದಾಟ ಪಡುವಂತಾಗಿತ್ತು.
ಇದು ಯಾವ ಮಟ್ಟಿಗೆ ಆಗಿದೆ ಎಂದರೆ, ಮಕ್ಕಳಿಗೆ ಹೇರ್‌ಕಟ್ ಮಾಡಿಸುವುದೂ ಸಹ ದೊಡ್ಡ ಸವಾಲು ಎನ್ನುವಂತಾಗಿಬಿಟ್ಟಿದೆ. ಟ್ವಿಟ್ಟರ್‌ನಲ್ಲಿ ಶೇರ್ ಮಾಡಲಾದ ವಿಡಿಯೊವೊಂದು ಈ ವಿಷಯವನ್ನು ಸಖತ್ತಾಗಿ ತೋರಿದೆ.
ತಮ್ಮ ಪುತ್ರ ಅನುಶ್ರುತ್ ಹೇರ್ ಕಟ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಅನುಪ್ ಹೆಸರಿನ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
“ನೀನೇಕೆ ಇಷ್ಟೊಂದು ಕಟ್ ಮಾಡುತ್ತಿರುವೆ? ನಿಲ್ಲಿಸು!” ಎಂದು ಸಿಟ್ಟುಗೊಂಡ ಮಗು ಕ್ಷೌರಿಕನ ಮೇಲೆ ಕೆಂಡ ಕಾರುತ್ತಿರುವುದನ್ನು ನೋಡಬಹುದಾಗಿದೆ.
ಇಷ್ಟು ಸಾಲದೇ, “ಏನು ಮಾಡುತ್ತಿರುವೆ? ನನಗೆ ಬಹಳ ಕೋಪ ಬಂದಿದೆ. ನಿನಗೆ ಹೊಡೆಯುತ್ತೇನೆ. ನಾನು ದೊಡ್ಡ ಹುಡುಗ, ನಿನ್ನ ಕೂದಲು ಕಟ್ ಮಾಡುವೆ. ನನ್ನ ಕೂದಲು ಕಟ್ ಮಾಡಲು ನಿನಗೆ ಬಿಡುವುದಿಲ್ಲ” ಎಂದು ತನ್ನ ಅಸಮಾಧಾನವನ್ನು ಅಪ್ಪನತ್ತ ಈ ಬಾಲಕ ತೋರಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ.