ಮನೆ ಕೆಲಸದಾಕೆಗೆ ಲೆಕ್ಕ ಮನವರಿಕೆ ಮಾಡಿಕೊಡಲು ಪರದಾಡುವ ನೈಜ ಘಟನೆಯ ವಿಡಿಯೋ ಸಖತ್ ವೈರಲ್ ಆಗಿದೆ.
ಮರಾಠಿಯಲ್ಲಿ ಮಾತನಾಡುವ ಆಕೆ, ತನಗೆ 1800 ರೂ.ಪಾವತಿಸಲಾಗಿಲ್ಲ ಎಂದು ವಾದಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು ಆದರೆ, ಮನೆಯಲ್ಲಿದ್ದ ಯುವಕರು ಆಕೆಗೆ ಪೂರ್ಣವಾಗಿ ಹಣ ಪಾವತಿಸಿದ್ದಾರೆ ಎಂದು ಹೇಳುತ್ತಾರೆ.
1500 ರೂ. ಮತ್ತು 300 ರೂ. ಸೇರಿ 1800 ಕೊಡಲಾಗಿದೆ ಎಂದು ಮನವರಿಕೆ ಮಾಡಿಕೊಡಲು ಆ ಯುವಕರು ಸುಸ್ತು ಹೊಡೆಯುತ್ತಾರೆ. ಆಕೆಗೆ ಲೆಕ್ಕ ಅರ್ಥ ಮಾಡಿಸುವುದನ್ನು ಆ ಯುವಕರೇ ವಿಡಿಯೋ ಮಾಡಿದ್ದಾರೆ.
500 ರೂ.ನ ಮೂರು ನೋಟು, ಒಂದು 200 ರೂ. ನೋಟು ಮತ್ತು ಒಂದು 100 ರೂ. ನೋಟುಗಳನ್ನು ಪಾವತಿಸಿದ್ದಾಗಿ ಅವರು ಹೇಳುತ್ತಾರೆ. ಆದರೆ 1500 ರೂ. ಮತ್ತು 300 ರೂ.1800 ರೂ. ಹೇಗೆ ಆಗುತ್ತದೆ ಎಂದು ಆಕೆ ಪ್ರಶ್ನಿಸುತ್ತಾಳೆ.
ಅಲ್ಲಲಿದ್ದವರು ಕ್ಯಾಲ್ಕುಲೇಟರ್‌ನಲ್ಲಿ ತೋರಿಸಲು ಪ್ರಯತ್ನಿಸುತ್ತಾರೆ, ಆದರೆ ಪ್ರಯತ್ನ ವ್ಯರ್ಥವಾಯಿತು.
ಇದೊಂದು ಹಾಸ್ಯಮಯ ವಿಡಿಯೋವಾಗಿ ವೈರಲ್ ಆಗಿದೆ. ಅನೇಕರು ಜಸ್ಟಿಸ್ ಫಾರ್ ಕಾಕು, ಆಕೆಗೆ ನ್ಯಾಯ ಸಿಗಬೇಕೆಂದು ವಾದಿಸಿದ್ದಾರೆ. ಇನ್ನು ಕೆಲವರು ಮುಂದೇನಾಯಿತು? ಹೇಗೆ ಒಪ್ಪಿಸಲಾಯಿತು ಎಂದು ಅಪ್‌ಡೇಟ್ ಕೇಳಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಟ್ವೀಟ್ ಮಾಡಿ, ಈ ವಿಷಯ ತಮಾಷೆ ಮಾಡುವುದಲ್ಲ. ಭಾರತದ ಆರ್ಥಿಕತೆಗೆ ಮತ್ತು ಸಮಾಜಕ್ಕೆ ಇಂಥವರೇ ಬೆನ್ನಲುಬು ಎಂದಿದ್ದಾರೆ.
https://twitter.com/DrVW30/status/1300091650149023744?ref_src=twsrc%5Etfw%7Ctwcamp%5Etweetembed%7Ctwterm%5E1300091650149023744%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fmaid-isnt-convinced-that-rs-1500-plus-rs-300-equals-rs-1800-netizens-want-justice-for-kaku-viral-video%2F645972