ಆಫ್ ರೋಡ್ ರೇಸಿಂಗ್ ಹುಚ್ಚು ಭಾರತದಲ್ಲಿ ದಿನೇ ದಿನೇ ರಂಗು ಪಡೆದುಕೊಳ್ಳುತ್ತಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಎಸ್ಯುವಿಗಳನ್ನು ಓಡಿಸುವ ಮೂಲಕ ತಂತಮ್ಮ ಡ್ರೈವಿಂಗ್ ಕೌಶಲ್ಯವನ್ನು ಒರೆಗೆ ಹಚ್ಚುವ ಉತ್ಸಾಹ ಬಹಳಷ್ಟು ಮಂದಿಯಲ್ಲಿ ಗೋಚರವಾಗುತ್ತಿದೆ.
ಇಂಟರ್ನೆಟ್ನಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಮಹಿಂದ್ರಾ ಥಾರ್ ಒಂದು ಮರಳಿನಲ್ಲಿ ಸಿಲುಕಿಕೊಂಡಿದ್ದ ರೇಂಜ್ ರೋವರ್ ಒಂದನ್ನು ಹೊರಗೆಳೆಯುತ್ತಿರುವುದನ್ನು ನೋಡಬಹುದಾಗಿದೆ.
ಏಳು ನಿಮಿಷಗಳ ಈ ವಿಡಿಯೋದಲ್ಲಿ: ಸಡಿಲವಾದ ಮರಳಿನಲ್ಲಿ ಸಿಲುಕಿದ್ದ ರೇಂಜ್ ರೋವರ್ನ ಎವೋಕ್ ಕಾರಿನ ಚಕ್ರಗಳು ಟ್ರಾಕ್ಷನ್ ಪಡೆಯಲಾಗದೇ ಮುಂದೆ ಸಾಗಲು ವಿಫಲವಾಗುತ್ತಿದ್ದವು. ಬಳಿಕ ಅಲ್ಲಿಗೆ ಬಂದ ಥಾರ್ ಎಸ್ಯುವಿ ಎವೋಕ್ ಅನ್ನು ಹಗ್ಗದ ಮೂಲಕ ಮೇಲೆತ್ತಿದೆ.