ಕೋವಿಡ್-19 ಸಾಂಕ್ರಾಮಿಕ ಮತ್ತೊಮ್ಮೆ ವ್ಯಾಪಿಸುವ ಸೂಚನೆಗಳನ್ನು ಕೊಡುತ್ತಿದ್ದು, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 8,807 ಪ್ರಕರಣಗಳು ದಾಖಲಾಗಿವೆ. ಹಿಂದಿನ ದಿನದ ಏರಿಕೆಗಿಂತ 2000 ಪ್ರಕರಣಗಳು ಹೆಚ್ಚಾಗಿವೆ.
ಸೋಂಕಿತರ ಸಂಖ್ಯೆ ಏರಿಕೆಯಾದ ಬೆನ್ನಿಗೆ ರಾಜ್ಯಾದ್ಯಂತ ಸೋಂಕು ಪರೀಕ್ಷಾ ಕ್ರಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಮುನಿಸಿಪಲ್ ಆಯುಕ್ತರಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೂಚಿಸಿದ್ದಾರೆ.
ಕೋವಿಡ್ ಸೋಂಕಿನ ವಿರುದ್ಧ ಗೆದ್ದು ಬಂದ 105 ರ ಜೀವ
ದೇಶದಲ್ಲಿ ಕೋವಿಡ್-19 ಸೋಂಕಿಗೆ ಅತ್ಯಂತ ಕೆಟ್ಟದಾಗಿ ತುತ್ತಾಗಿರುವ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರದಲ್ಲಿ ಸೋಂಕಿನ ಎರಡು ಹೊಸ ಅವತರಣಿಕೆಗಳಾದ ಎನ್440ಕೆ ಹಾಗೂ ಇ484ಕೆ ಪತ್ತೆಯಾಗಿವೆ.
ಕಳೆದ ನಾಲ್ಕು ತಿಂಗಳಿನಿಂದ ಇದೇ ಮೊದಲ ಬಾರಿಗೆ ಮುಂಬೈಯಲ್ಲಿ ದಿನವೊಂದರಲ್ಲಿ ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ 1,167 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ ಈ ಮಟ್ಟದ ಏರಿಕೆಯು ನವೆಂಬರ್ 2020ರಲ್ಲಿ ದಾಖಲಾಗಿತ್ತು.