ಕಳೆದ ಮೂರು ತಿಂಗಳುಗಳಿಂದ ಚರಂಡಿ ನೀರಿನಲ್ಲಿ ಸಿಲುಕಿದ್ದ ಐದು ವರ್ಷದ ಗಂಡು ಮೊಸಳೆಯೊಂದನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಸ್ಥಳೀಯ ನಿವಾಸಿಗಳು ಮೊಸಳೆಯ ಇರುವಿಕೆ ಬಗ್ಗೆ ದೂರು ನೀಡಿದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ.
“1.85 ಮೀಟರ್ ಉದ್ದದ ಮೊಸಳೆಯು ಸೊಲ್ಲಾಪುರದ ಕೊಳಚೆ ನೀರು ಬರುವ ಚರಂಡಿಯೊಂದರಲ್ಲಿ ಕಳೆದ ಮೂರು ತಿಂಗಳುಗಳಿಂದ ಸಿಲುಕಿಕೊಂಡಿತ್ತು. ಇಲ್ಲಿನ ನಿವಾಸಿಗಳು ನಮಗೆ ವಿಷಯ ಮುಟ್ಟಿಸಿದ ಬಳಿಕ ಮೊಸಳೆಯ ಚಲನವಲನಗಳನ್ನು ಒಂದೂವರೆ ತಿಂಗಳುಗಳ ಮಟ್ಟಿಗೆ ಗಮನಿಸಿ, ಅದಕ್ಕೆ ಮೂರು ಬೋನುಗಳನ್ನು ಸೆಟ್ ಮಾಡಿ ಮಾಂಸದ ತುಂಡೊಂದನ್ನು ಬಳಸಿ ಟ್ರಾಪ್ ಮಾಡಿದ್ದೇವೆ” ಎಂದು ರೇಂಜರ್ ಇರ್ಶದ್ ಶೇಖ್ ತಿಳಿಸಿದ್ದಾರೆ.
ಕಲುಷಿತ ನೀರಿನಲ್ಲಿದ್ದ ಕಾರಣ ಮೊಸಳೆಯ ಜೀವಕ್ಕೆ ಅಪಾಯವಿತ್ತು. ಮಹಾರಾಷ್ಟ್ರ ಅರಣ್ಯ ಇಲಾಖೆಯೊಂದಿಗೆ ಪುಣೆ ಮೂಲದ ಎನ್‌ಜಿಓ ಒಂದು ಸೇರಿಕೊಂಡು ಈ ರಕ್ಷಣಾ ಕಾರ್ಯಾಚರಣೆ ನಡೆಸಿದೆ.