ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಲೇ ಇದ್ದು, ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಆಸ್ಪತ್ರೆ, ಶವಾಗಾರ, ಸ್ಮಶಾನಗಳು ತುಂಬಿ ತುಳುಕುವಂತಾಗಿವೆ.
10 ಲಕ್ಷಕ್ಕೂ ಹೆಚ್ಚು ಸೋಂಕಿತರಿದ್ದು, 29 ಸಾವಿರ ಮಂದಿ ಮೃತಪಟ್ಟಿರುವ ವರದಿ ಇದೆ. ಮುಂಬೈ, ಪುಣೆ, ಥಾಣೆಯಲ್ಲಿ ಕ್ರಮವಾಗಿ 8109, 4754 ಹಾಗೂ 4134 ಸಾವು ಸಂಭವಿಸಿವೆ. ಜಲಗಾಂವ್, ನಾಸಿಕ್, ನಾಗಪುರ ಭಾಗದಲ್ಲೂ ಸಾವಿನ ಪ್ರಮಾಣ ಏರುತ್ತಿದೆ.
ಎಲ್ಲಕ್ಕಿಂತ ದುರಂತವೆಂದರೆ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಪೈಕಿ ಅನೇಕರು ದಾರಿ ಮಧ್ಯೆಯೇ ಕೊನೆಯುಸಿರೆಳೆಯುತ್ತಿದ್ದಾರೆ. ಕೆಲವರು ಬಹುವಿಧ ಕಾಯಿಲೆಯಿಂದ ಬಳಲಿ, ಕೊರೊನಾ ಕೂಡ ತಗುಲಿ ಸತ್ತಿರುತ್ತಾರೆ. ಗೊತ್ತೇ ಆಗುತ್ತಿಲ್ಲ.
ಇದರಿಂದ ಆಸ್ಪತ್ರೆ ಮಾತ್ರವಲ್ಲದೆ, ಶವಾಗಾರದಲ್ಲೂ ಹೆಣಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಶವಗಳಿಗೂ ಆಂಟಿಜೆನ್ ಪರೀಕ್ಷೆ ಮಾಡುವ ಮೂಲಕ ವಿಲೇವಾರಿ ಪ್ರಕ್ರಿಯೆ ಚುರುಕುಗೊಳಿಸಲು ಈ ತೀರ್ಮಾನಕ್ಕೆ ಬರಲಾಗಿದೆ.