ಕೋವಿಡ್ ಲಾಕ್ ಡೌನ್ ಅಡೆತಡೆಗಳ ನಡುವೆಯೇ ಮರವೊಂದರ ಮೇಲೆ ಕುಳಿತು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ವ್ಯಕ್ತಿಯೊಬ್ಬರು ಅಂತರ್ಜಾಲದಲ್ಲಿ ಸೆನ್ಸೇಶನ್ ಆಗಿದ್ದು ಜನಮೆಚ್ಚುಗೆಗೆ ಭಾಜನರಾಗಿದ್ದಾರೆ.
ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯ ಧಡ್‌ಗಾವ್ ಎಂಬ ಊರಿನಲ್ಲಿ, ಸ್ಮಾರ್ಟ್‌ಫೋನ್ ಕೈಯ್ಯಲ್ಲಿ ಹಿಡಿದು, ನೆಟ್‌ವರ್ಕ್‌ಗಾಗಿ ಮರವೊಂದರ ಮೇಲೆ ಕುಳಿತುಕೊಂಡು ಮಕ್ಕಳೊಂದಿಗೆ ಬೋರ್ಡ್ ಹಿಡಿದು ಪಾಠ ಹೇಳುತ್ತಿದ್ದಾರೆ ಈ ವ್ಯಕ್ತಿ. ಮಹಾರಾಷ್ಟ್ರ ಶಿಕ್ಷಣ ಇಲಾಖೆಯ ನಾಶಿಕ್ ವಿಭಾಗದ ಉಪ ನಿರ್ದೇಶಕ ಪ್ರವೀಣ್ ಪಾಟೀಲ್ ಮಾತನಾಡಿ, ಆ ಪ್ರದೇಶದಲ್ಲಿ ಕೆಲವೇ ಕೆಲವು ಮೊಬೈಲ್ ಟವರ್‌ಗಳಿವೆ ಎಂದಿದ್ದಾರೆ.
ಮತ್ತೊಂದು ನಿದರ್ಶನದಲ್ಲಿ, ಜಾರ್ಖಂಡ್‌ನ ಧುಮ್ಕಾ ಜಿಲ್ಲೆಯ ಬಂಕಾಥಿ ಹೆಸರಿನ ಗ್ರಾಮವೊಂದರಲ್ಲಿ ಶಿಕ್ಷಕರೊಬ್ಬರು ಮಕ್ಕಳಿಗೆ ಪಾಠ ಹೇಳಿಕೊಡಲು ಊರಿನ ತುಂಬೆಲ್ಲಾ ಲೌಡ್‌ಸ್ಪೀಕರ್ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.