ಕೊರೊನಾ ಲಸಿಕೆಯ ಎರಡನೇ ಡೋಸ್ ಸ್ವೀಕರಿಸಿದ ಬಳಿಕ 45 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ವ್ಯಕ್ತಿಯ ಸಾವಿಗೆ ಕಾರಣ ಇನ್ನೂ ನಿಗೂಢವಾಗಿದೆ ಅಂತಾ ವೈದ್ಯರು ಹೇಳ್ತಿದ್ದಾರೆ.
ಭಿವಾಂಡಿಯ ನಿವಾಸಿ ಸುಖದೇವ್ ಕಿರ್ದತ್ ಎಂಬವರು ಕಣ್ಣಿನ ತಜ್ಞರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಈ ವ್ಯಕ್ತಿ ಎರಡನೇ ಡೋಸ್ ಬಳಿಕ ತಲೆಸುತ್ತಿ ಬಿದ್ದ ಕಾರಣ 15 ನಿಮಿಷಗಳ ಕಾಲ ನಿಗಾದಲ್ಲಿ ಇರಿಸಲಾಗಿತ್ತು.
ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಲಸಿಕೆ ಸ್ವೀಕರಿಸಿದ ಎರಡು ಮಕ್ಕಳ ತಂದೆ ಸುಖದೇವ್ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಅಧಿಕೃತ ಮಾಹಿತಿ ನೀಡಿದೆ.
ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಅಸಲಿ ಕಾರಣ ತಿಳಿಯಲಿದೆ ಎಂದು ವೈದ್ಯರು ಹೇಳಿದ್ದಾರೆ. ಸುಖದೇವ್ ಜನವರಿ 28ರಂದು ಮೊದಲ ಡೋಸ್ ಸ್ವೀಕರಿಸಿದ್ದರು.
ಕಳೆದ ತಿಂಗಳು ಕೊರೊನಾ ಲಸಿಕೆ ಮೊದಲ ಡೋಸ್ ಪಡೆದಾಗ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ. ಈ ವ್ಯಕ್ತಿ ಬಹಳ ವರ್ಷಗಳಿಂದ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಡೋಸ್ ಸ್ವೀಕರಿಸುವ ಮೊದಲು ಅವರ ಬಿಪಿ ಹಾಗೂ ಆಮ್ಲಜನಕ ಮಟ್ಟ ನಾರ್ಮಲ್ ಆಗಿತ್ತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.