ದೆಹಲಿ, ಗುಜರಾತ್, ರಾಜಸ್ಥಾನ ಹಾಗೂ ಗೋವಾದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರು ಕೊರೊನಾ ನೆಗೆಟಿವ್ ರಿಪೋರ್ಟ್ ಹೊಂದುವುದು ಕಡ್ಡಾಯ ಅಂತಾ ಸೇನಾ ಸರ್ಕಾರ ಹೇಳಿದೆ.
ಕೊರೊನಾದಿಂದ ಭಾರೀ ಹೊಡೆತ ತಿಂದಿದ್ದ ಮಹಾರಾಷ್ಟ್ರ ಇದೀಗ ಕೊಂಚ ಸುಧಾರಿಸಿಕೊಳ್ಳುತ್ತಿದೆ. ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸದ್ಯ ಕೊರೊನಾ ಕೇಸ್ ಜಾಸ್ತಿ ಹೊಂದಿರುವ ರಾಜ್ಯದಿಂದ ಸಂಚರಿಸುವ ಪ್ರಯಾಣಿಕರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.
ವಿಮಾನ, ರೈಲು ಮಾರ್ಗದ ಮೂಲಕ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ. ವಿಮಾನ ಮಾರ್ಗದಿಂದ ಬರುವವರು ಮಹಾರಾಷ್ಟ್ರಕ್ಕೆ ಬಂದಿಳಿಯುವ 72 ಗಂಟೆ ಮುನ್ನ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು. ಅದೇ ರೀತಿ ರೈಲುಗಳಿಗೆ 96 ಗಂಟೆ ನಿಗದಿ ಮಾಡಲಾಗಿದೆ.