ಮುಂಬೈ: ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕೋವಿಡ್ ಟೆಸ್ಟ್ ಗೆ ಬಂದಿದ್ದ ಯುವತಿ ಗುಪ್ತಾಂಗದಿಂದ ಸ್ವ್ಯಾಬ್ ಸಂಗ್ರಹಿಸಲಾಗಿದೆ.
ಕೊರೊನಾ ಭೀತಿಯಿಂದ 24 ವರ್ಷದ ಯುವತಿ ಕೋವಿಡ್ ಟೆಸ್ಟ್ ಗೆ ಬಂದಿದ್ದು, ಈ ವೇಳೆ ಲ್ಯಾಬ್ ಟೆಕ್ನಿಷಿಯನ್ ಗುಪ್ತಾಂಗದಿಂದಲೂ ಸ್ವ್ಯಾಬ್ ತೆಗೆದುಕೊಳ್ಳಬೇಕು ಎಂದು ಹೇಳಿ ಯುವತಿ ಗುಪ್ತಾಂಗದಿಂದ ಸ್ವ್ಯಾಬ್ ಪಡೆದುಕೊಂಡಿದ್ದಾನೆ.
ಅಮರಾವತಿ ಮಾಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಹೋದ್ಯೋಗಿಗೆ ಕೊರೊನಾ ಸೋಂಕು ತಗುಲಿತ್ತು. ಇದರಿಂದಾಗಿಯೇ ಈಕೆಯೂ ಕೋವಿಡ್ ಪರೀಕ್ಷೆ ಮಾಡಿಸಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಲ್ಯಾಬ್ ಟೆಕ್ನಿಷಿಯನ್ ಗುಪ್ತಾಂಗದಲ್ಲಿ ಸ್ಯಾಂಪಲ್ ಸಂಗ್ರಹಿಸಿಬೇಕೆಂದು ನಂಬಿಸಿ ಸ್ಯಾಂಪಲ್ ಪಡೆದುಕೊಂಡಿದ್ದಾನೆ.
ನಂತರದಲ್ಲಿ ಯುವತಿ ಸಹೋದರನಿಗೆ ವಿಷಯ ತಿಳಿಸಿದ್ದು, ಆತ ವೈದ್ಯರ ಬಳಿ ಕೇಳಿದಾಗ ಅಂತಹ ಯಾವುದೇ ಪರೀಕ್ಷೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಯಶೋಮತಿ ಠಾಕೂರ್ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.