ಚುನಾವಣೆಯಲ್ಲಿ ಪ್ರತಿಯೊಂದು ವೋಟು ಮಹತ್ವ ಪಡೆಯುತ್ತದೆ. ಒಂದು ವೋಟು ಕಡಿಮೆಯಾದ್ರೂ ಚುನಾವಣೆಯಲ್ಲಿ ಸೋಲನುಭವಿಸಬೇಕು. ಮಹಾರಾಷ್ಟ್ರದ ಪುಣೆಯಲ್ಲಿ ಒಂದು ವೋಟಿನ ಮಹತ್ವ ಮೊಮ್ಮಗನಿಗೆ ಗೊತ್ತಾಗಿದೆ. ಅಜ್ಜಿಯ ವೋಟು ಮೊಮ್ಮಗನ ಗೆಲುವಿಗೆ ಕಾರಣವಾಗಿದೆ.
ಮಹಾರಾಷ್ಟ್ರದ ಗ್ರಾಮ ಪಂಚಾಯತಿ ಚುನಾವಣೆ ಜನವರಿ 15ರಂದು ನಡೆದಿದೆ. ಪುಣೆಯ ಮುಲ್ಶಿ ಗ್ರಾಮದ ವಿಜಯ್ ಸಾಠೆ ಚುನಾವಣೆಗೆ ಸ್ಪರ್ಧಿಸಿದ್ದರು. ಅವ್ರ 113 ವರ್ಷದ ಅಜ್ಜಿ ಚುನಾವಣೆಯಲ್ಲಿ ಮತದಾನ ಮಾಡಿದ್ದರು. ಆದ್ರೆ ಮತದಾನ ನಡೆದ ರಾತ್ರಿಯೇ ಸರುಭಾಯಿ ಸಾಠೆ ಸಾವನ್ನಪ್ಪಿದ್ದಾರೆ.
ಜನವರಿ 18ರಂದು ಮತದಾನ ನಡೆದಿದೆ. ಆಗ ವಿಜಯ್ ಸಾಠೆ ಒಂದು ಮತದಿಂದ ಚುನಾವಣೆ ಗೆದ್ದಿರುವುದು ಬಹಿರಂಗವಾಗಿದೆ. ಅಜ್ಜಿಯ ಒಂದು ಮತ ವಿಜಯ್ ಗೆಲುವಿಗೆ ಕಾರಣವಾಗಿದೆ. ಆದ್ರೆ ಮೊಮ್ಮಗನ ಗೆಲುವು ನೋಡಲು ಅಜ್ಜಿ ಜೊತೆಯಲ್ಲಿಲ್ಲ ಎಂಬುದು ಎಲ್ಲರ ನೋವು.
ಮೊಮ್ಮಗ ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ಮಾಡ್ಲಿ ಎಂದು ಅಜ್ಜಿ ಬಯಸಿದ್ದರಂತೆ. ಇದೇ ಕಾರಣಕ್ಕೆ ಮೊಮ್ಮಗನಿಗೆ ಮತ ಹಾಕಲು ಬಂದಿದ್ದರಂತೆ. ಆ ದಿನ ಅಜ್ಜಿ ಮತ ಹಾಕಲು ಬರದೆ ಹೋದ್ರೆ ನಾನು ಸೋಲುನುಭವಿಸಬೇಕಾಗಿತ್ತು ಎಂದು ವಿಜಯ್ ಹೇಳಿದ್ದಾರೆ.